Loading...

ಟಾಟಾ ವಿಂಗರ್ ಕಾರ್ಗೋ ವೈಶಿಷ್ಟ್ಯಗಳು

Tata Winger Cargo Features
  • ಶಕ್ತಿ ಮತ್ತು
    ಇಂಧನ ದಕ್ಷತೆ
  • ಪ್ರದರ್ಶನ ಮತ್ತು ಒರಟುತನ
  • ಅಧಿಕ ಆದಾಯ
  • ಹೆಚ್ಚಿನ ಸುರಕ್ಷತೆ
  • ಅತ್ಯಧಿಕ ಉಳಿತಾಯ
  • ಸೌಕರ್ಯ ಮತ್ತು ಅನುಕೂಲತೆಯಲ್ಲಿ ಉತ್ಕೃಷ್ಠ
ಶಕ್ತಿ ಮತ್ತು ಇಂಧನ ದಕ್ಷತೆ

ಟಾಟಾ ವಿಂಗರ್ ಕಾರ್ಗೋ ವ್ಯಾನ್ ವಿಶ್ವಾಸಾರ್ಹ ಮತ್ತು ಇಂಧನ ದಕ್ಷತೆಯ TATA 2.2L BS 6 (2179 cc) ಎಂಜಿನ್‌ನ್ನು ಹೊಂದಿದೆ.

ಇದು 73.5 kW (100 HP) @ 3750 r/min ನ ದಿಗ್ಭ್ರಮೆಗೊಳಿಸುವ ಗರಿಷ್ಠ ಶಕ್ತಿಯನ್ನು ನೀಡುತ್ತದೆ ಜೊತೆಗೆ 200 Nm ನ 1000-3500 r/min ನಲ್ಲಿ ಹೆಚ್ಚು ಉಪಯುಕ್ತವಾದ ಗರಿಷ್ಠ ಟಾರ್ಕ್ ಹೊಂದಿದೆ.

ಪ್ರದರ್ಶನ ಮತ್ತು ಒರಟುತನ

ಟಾಟಾ ವಿಂಗರ್ ಕಾರ್ಗೋ ವ್ಯಾನ್ ಅನ್ನು 'ಪ್ರೀಮಿಯಂ ಟಫ್' ವಿನ್ಯಾಸದ ಫಿಲಾಸಫಿಯೊಂದಿಗೆ ನಿರ್ಮಿಸಲಾಗಿದೆ, ಇದು ಗಟ್ಟಿತನ ಮತ್ತು ಬಾಳಿಕೆಗೆ ರಾಜಿ ಮಾಡಿಕೊಳ್ಳದೆ ಸ್ಟೈಲ್ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ

ಗಟ್ಟಿಮುಟ್ಟಾದ ಮುಂಭಾಗ ಮತ್ತು ಹಿಂಭಾಗದ ಸಸ್ಪೆನ್ಷನ್ ಜೊತೆಗೆ, ಟಾಟಾ ವಿಂಗರ್ ಕಾರ್ಗೋ ವ್ಯಾನ್ 195 R 15 LT ಟೈರ್‌ಗಳನ್ನು ಮತ್ತು 185 mm ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತದೆ, ಇದು ವೈವಿಧ್ಯಮಯ ಅಪ್ಲಿಕೇಶನ್‌ಗಳಲ್ಲಿ ಒರಟಾದ ಬಳಕೆಗೆ ಸೂಕ್ತವಾಗಿದೆ.

ಅಧಿಕ ಆದಾಯ

ಟಾಟಾ ವಿಂಗರ್ ಕಾರ್ಗೋ ವ್ಯಾನ್‌ನ ಕಾಂಪ್ಯಾಕ್ಟ್ ಇಂಜಿನ್ ಕಂಪಾರ್ಟ್‌ಮೆಂಟ್‌ನೊಂದಿಗೆ ನಿಮ್ಮ ಆದಾಯವನ್ನು ಹೆಚ್ಚಿಸಿ, ಇದು ಸರಕುಗಳನ್ನು ಲೋಡ್ ಮಾಡಲು ಮತ್ತು ಇಳಿಸಲು ಸುಲಭವಾಗುವಂತೆ ಆಂತರಿಕ ಎತ್ತರದ ಜೊತೆಗೆ ಉತ್ತಮ ಸರಕು ಲೋಡಿಂಗ್ ಏರಿಯಾವನ್ನು ಹೊಂದಿದೆ

1680 ಕೆಜಿಯ ಪೇಲೋಡ್ ಮತ್ತು 3240 mm x 1640 mm x 1900 mm ನ ಆಂತರಿಕ ಕಾರ್ಗೋ ಬಾಕ್ಸ್ ಆಯಾಮವು ಹೆಚ್ಚಿನ ಆದಾಯಕ್ಕೆ ಸೂಕ್ತವಾಗಿದೆ.

ಹೆಚ್ಚಿನ ಸುರಕ್ಷತೆ

ಗಟ್ಟಿಮುಟ್ಟಾದ ಮತ್ತು ಒರಟಾದ 'ಪ್ರೀಮಿಯಂ ಟಫ್' ಬಾಡಿಯ ಜೊತೆಗೆ, ಟಾಟಾ ವಿಂಗರ್ ಕಾರ್ಗೋ ವ್ಯಾನ್ ಸೆಮಿ-ಫಾರ್ವರ್ಡ್ ಫೇಸ್ ಮೂಲಕ ರಕ್ಷಣೆಯ ಶಕ್ತಿಯನ್ನು ನೀಡುತ್ತದೆ ಮತ್ತು ಅದು ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಡ್ರೈವರ್‍ ಏರಿಯಾ ಮತ್ತು ಕಾರ್ಗೋ ಏರಿಯಾದ ನಡುವಿನ ಡ್ರೈವ್ ಪಾರ್ಟಿಶನ್ ಒಳಗಿರುವವರಿಗೆ ಮತ್ತು ಸರಕುಗಳಿಗೆ ಹೆಚ್ಚುವರಿ ಸುರಕ್ಷತೆಯನ್ನು ನೀಡುತ್ತದೆ

ಅತ್ಯಧಿಕ ಉಳಿತಾಯ

ವರ್ಧಿತ ಉಳಿತಾಯಕ್ಕಾಗಿ ಇಂಧನದ ಅತ್ಯುತ್ತಮ ಬಳಕೆಯನ್ನು ಒದಗಿಸಲು ECO ಸ್ವಿಚ್ ಅನ್ನು ವಿನ್ಯಾಸಗೊಳಿಸಲಾಗಿದೆ

ಗೇರ್ ಶಿಫ್ಟ್ ಅಡ್ವೈಸರನ್ನು ಚಾಲಕರು ಸರಿಯಾದ ಕ್ಷಣದಲ್ಲಿ ಗೇರ್ ಬದಲಾಯಿಸಲು ಸಹಾಯ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ, ಇದು ಇಂಧನ ದಕ್ಷತೆಯಲ್ಲಿ ಸುಧಾರಣೆಯನ್ನು ತರುತ್ತದೆ.

ದೀರ್ಘಾವಧಿಯ ಸರ್ವೀಸ್ ಮಧ್ಯಂತರಗಳು ಮತ್ತು ಕಡಿಮೆ ಕಾರ್ಯಾಚರಣೆಯ ವೆಚ್ಚಗಳು ಉಳಿತಾಯವನ್ನು ಹೆಚ್ಚಿಸುತ್ತವೆ ಮತ್ತು ಮಾಲೀಕತ್ವದ ಒಟ್ಟು ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ

ಸೌಕರ್ಯ ಮತ್ತು ಅನುಕೂಲತೆಯಲ್ಲಿ ಉತ್ಕೃಷ್ಠ

ಏರೋಡೈನಾಮಿಕ್ ಮತ್ತು ಸ್ಲೀಕ್‌ ಹೊಂದಿದ, ಟಾಟಾ ವಿಂಗರ್ ಕಾರ್ಗೋ ವ್ಯಾನ್‌ನ ಕ್ಯಾಬಿನ್‌ನ ಕಾಕ್‌ಪಿಟ್ ಮಾದರಿಯ ವಿನ್ಯಾಸವು ಹೆಚ್ಚಿನ ಸೌಕರ್ಯಕ್ಕಾಗಿ ವರ್ಧಿತ ಚಾಲಕ ದಕ್ಷತಾಶಾಸ್ತ್ರವನ್ನು ಖಚಿತಪಡಿಸುತ್ತದೆ.

D+2 ಆಸನವು ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ, ಅದೇ ರೀತಿ 3 ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಚಾಲನೆ ಮಾಡುವಾಗ ಆಯಾಸವನ್ನು ಕಡಿಮೆ ಮಾಡುತ್ತದೆ

ಟಾಟಾ ವಿಂಗರ್ ಕಾರ್ಗೋ ವ್ಯಾನ್‌ನ 3 ವರ್ಷಗಳು ಅಥವಾ 3 ಲಕ್ಷ ಕಿಮೀ (ಇವುಗಳಲ್ಲಿ ಮೊದಲಿನದು) ವಾರಂಟಿ ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಸಮಯವನ್ನು ಖಚಿತಪಡಿಸುತ್ತದೆ, ನಿಮ್ಮ ಉತ್ಪಾದಕತೆಯನ್ನು ನಿರಾಯಾಸವಾಗಿ ಹೆಚ್ಚಿಸುತ್ತದೆ.