Loading...

ಯೋಧಾ ಬಿಎಸ್6 ಪಿಕಪ್ ಗುಣಲಕ್ಷಣಗಳು

ಯೋಧಾ ಬಿಎಸ್6 ಪಿಕಪ್ ಗುಣಲಕ್ಷಣಗಳು
  • ಇಂಧನ &
    ಇಂಧನ ಕ್ಷಮತೆ
  • ಕಾರ್ಯಕ್ಷಮತೆ & ಒರಟುತನ
  • ಅಧಿಕ ಆದಾಯ
  • ಅಧಿಕ ಸುರಕ್ಷೆ
  • ಅಧಿಕ ಉಳಿತಾಯ
  • ಅತ್ಯಧಿಕ ಆರಾಮ ಮತ್ತು ಅನುಕೂಲ
ಇಂಧನ & ಇಂಧನ ಕ್ಷಮತೆ

ಟಾಟಾ ಯೋಧಾ ಸರಣಿಯ ಪಿಕಪ್‌ಗಳು ಸದಾ ನಂಬಿಕಾರ್ಹವಾಗಿರುವ ಟಾಟಾ ಮೋಟಾರ್ಸ್ 2.2 L DI ಇಂಜಿನ್‌ ಶಕ್ತಿಯನ್ನು ಪಡೆದಿವೆ, ಅದು ಅತ್ಯುತ್ತಮ ದರ್ಜೆಯ ಶಕ್ತಿ ಮತ್ತು ಇಂಧನ ಕ್ಷಮತೆಯನ್ನು ನೀಡುತ್ತದೆ.

ಈ ಹೆವಿ ಡ್ಯೂಟಿ ಎಂಜಿನ್ ಅನ್ನು 73.6 ಕಿವಾ (100 ಎಚ್‌ಪಿ) ಶಕ್ತಿ ಮತ್ತು 250 ಎನ್‌ಎಂಗಳಷ್ಟು ಅಧಿಕ ಟಾರ್ಕ್‌ಗಾಗಿ ಫ್ಲಾಟ್ ಕರ್ವ್ ಅಗಲವಾದ ಬ್ಯಾಂಡ್ 1000 - 2500 ಆರ್‌/ನಿಮಿಷದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಗೇರ್ ಬದಲಾವಣೆಗಳು ಕಡಿಮೆ ಇರುತ್ತವೆ ಮತ್ತು ಭಾರ ಹೊತ್ತಿರುವ ಸ್ಥಿತಿಗಳಲ್ಲಿ ಉತ್ತಮ ಪಿಕಪ್ ಕೊಡುತ್ತದೆ, ಹೆಚ್ಚುವರಿಯಾಗಿ ಕಡಿಮೆ ಎನ್‌ವಿಎಚ್‌ (ಶಬ್ದ- ಕಂಪನ- ಗಡಸುತನ)ದ ಆಶ್ವಾಸನೆಯಿಂದಾಗಿ ಸರಾಗವಾದ ಮತ್ತು ಆರಾಮದಾಯಕ ಚಾಲನೆ ಅನುಭವ ಗಳಿಸಬಹುದು.

ಕಾರ್ಯಕ್ಷಮತೆ & ಒರಟುತನ

ಬಲಿಷ್ಠ ಮತ್ತು ವಿಶ್ವಾಸಾರ್ಹ ಚಾಲನಾ ಸಾಮಗ್ರಿಗಳನ್ನು ಹೊಂದಿರುವ ದೈತ್ಯ ಟಾಟಾ ಯೋಧಾ ಪಿಕಪ್‌ನೊಂದಿಗೆ ಎಲ್ಲಿಗೆ ಬೇಕಾದರೂ ಪ್ರಯಾಣಿಸಿ: ಬಲಿಷ್ಠ ಸಸ್ಪನ್ಷನ್‌, ಅಗಲವಾದ ರೇರ್ ಆಕ್ಸಲ್, ಮುಂಬದಿಯಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಅತಿ ಕ್ಲಿಷ್ಟಕರ ಪ್ರದೇಶದಲ್ಲೂ ಬಿರುಸಾದ ಎಲ್ಲಾ ಭಾರವನ್ನೂ ಸಹಿಸಲು ಸಾಧ್ಯವಾಗಿರುವ 4ಎಂಎಂ ದಪ್ಪನೆಯ-ರೋಲ್ಡ್ ಚಾಸಿ ಫ್ರೇಮ್.

ದೊಡ್ಡ 16-ಇಂಚು ಟೈರ್‌ಗಳು ಮತ್ತು ವಿಶ್ವಾಸಾರ್ಹ ಗೇರ್ ಬಾಕ್ಸ್‌ನಿಂದಾಗಿ, ಇದು 40%ವರೆಗೆ ಗ್ರೇಡೇಬಿಲಿಟಿಯನ್ನು ಒದಗಿಸುತ್ತದೆ 260 mm ನ ಕ್ಲಚ್ ವ್ಯಾಸವು ಸರಾಗವಾಗಿ ಗೇರ್ ಬದಲಾವಣೆ ಸಾಧ್ಯವಾಗಿಸುತ್ತದೆ ಮತ್ತು ಕ್ಲಚ್ ಬಾಳಿಕೆಯನ್ನು ಧೀರ್ಘಗೊಳಿಸುತ್ತದೆ. ಇದಕ್ಕೆ ಪೂರಕವಾಗಿ, ಅದರ ಅತ್ಯುನ್ನತೀಕರಿಸಿದ ಗೇರ್ ಅನುಪಾತಗಳು ಮತ್ತು ರೇರ್ ಡಿಫರೆನ್ಷಿಯಲ್ ಆಕ್ಸಲ್ ಗೇರ್ ಅನುಪಾತವು ಅಧಿಕ ಎಳೆಯುವ ಶಕ್ತಿ ಮತ್ತು ಮೈಲೇಜ್‌ನ ಖಾತರಿ ಕೊಡುತ್ತದೆ. ಜೊತೆಯಲ್ಲಿ, 210 mm ನಷ್ಟು ಗ್ರೌಂಡ್ ಕ್ಲಿಯರೆನ್ಸ್‌ನಿಂದಾಗಿ ನಿಮಗೆ ಅತೀ ಕಠಿಣ ರಸ್ತೆಯ ಸ್ಥಿತಿಗಳಲ್ಲೂ ಯಾವುದೇ ಭಾರ ಹೊತ್ತೊಯ್ಯಲು ಅವಕಾಶ ಕೊಡುತ್ತದೆ.

ಅಧಿಕ ಆದಾಯ

ಅತೀ ದೊಡ್ಡ ಕಾರ್ಗೋ ಡೆಕ್ ಆಂತರಿಕ ಲೋಡಿಂಗ್ ಪ್ರದೇಶವಾದ 47.9 ಚದರ ಅಡಿ ಇರುವ ಮತ್ತು 1200 ಕೆಜಿ, 1500 ಕೆಜಿ ಮತ್ತು 1700 ಕೆಜಿ ಯಷ್ಟು ಭಾರವನ್ನು ಹೊರುವ ಆಯ್ಕೆಗಳನ್ನು ಹೊಂದಿರುವ ಟಾಟಾ ಯೋಧ ಪಿಕಪ್‌ನಿಂದ ನಿಮ್ಮ ಲಾಭಗಳನ್ನು ಗರಿಷ್ಠಗೊಳಿಸಿ. ಅದರ CED ಪೈಂಟ್ ಮಾಡಲಾದ ಅಧಿಕ ಸಾಮರ್ಥ್ಯದ ಸ್ಟೀಲ್ ಬಾಡಿ ಗರಿಷ್ಠ ಬಾಳಿಕೆಯನ್ನು ಒದಗಿಸುತ್ತದೆ. ಪೂರಕವಾಗಿ, ಅದರ ಬರೋಬ್ಬರಿ 16 ಇಂಚು ಟೈರ್‌ಗಳು ಯಾವುದೇ ಪ್ರದೇಶದಲ್ಲೂ ಎಲ್ಲಾ ಭಾರಗಳನ್ನು ಸರಾಗವಾಗಿ ಕೊಂಡೊಯ್ಯುತ್ತವೆ. ಟಾಟಾ ಯೋಧವನ್ನು ಬಲಿಷ್ಠವಾಗಿ ಎಲ್ಲಾ ಗ್ರೇಡ್‌ಗಳು, ಭಾರಗಳು ಮತ್ತು ರಸ್ತೆಯ ಸ್ಥಿತಿಗಳ ಮೇಲೂ ಕಾರ್ಯನಿರ್ವಹಿಸುವಂತೆ ಮತ್ತು ಅದರಿಂದ ನಿಮ್ಮ ಗಳಿಕೆ ಗರಿಷ್ಠವಾಗುವಂತೆ ನಿರ್ಮಿಸಲಾಗಿದೆ.

ಅಧಿಕ ಸುರಕ್ಷೆ

ಟಾಟಾ ಯೋಧಾ ಪಿಕಪ್ ಸರಣಿಯನ್ನು ಅದು ಹೊತ್ತೊಯ್ಯುವ ಪ್ರಯಾಣಿಕರು ಮತ್ತು ಸರಕುಗಳನ್ನು ಅತ್ಯುನ್ನತ ಸುರಕ್ಷೆಯಲ್ಲಿ ಸಾಗಾಟ ಮಾಡಲು ಸಾಧ್ಯವಾಗುವಂತೆ ನಿರ್ಮಿಸಲಾಗಿದೆ. ಅದು ಮುಂಬದಿ ಢಿಕ್ಕಿ ಉಂಟಾದಲ್ಲಿ ಗರಿಷ್ಠ ಸುರಕ್ಷೆಯ ಖಾತರಿ ನೀಡುವಂತೆ ಕ್ರಂಪಲ್ ವಲಯದೊಂದಿಗೆ ದೊಡ್ಡ ಬಾನೆಟ್ ಮತ್ತು ಕೊಲ್ಯಾಪ್ಸ್ ಮಾಡಬಹುದಾದ ಸ್ಟೀರಿಂಗ್ ವೀಲ್‌ ಹೊಂದಿದೆ. ಆಂಟಿ-ರೋಲ್ ಬಾರ್‌ಗಳನ್ನು ಮುಂಭಾಗದಲ್ಲಿ ಜೋಡಿಸಲಾಗಿದೆ ಮತ್ತು ಅಗಲವಾದ ರೇರ್ ಆಕ್ಸಲ್ ಟ್ರ್ಯಾಕ್ ರಸ್ತೆಯ ಮೇಲೆ ಮತ್ತು ರಸ್ತೆಯ ಹೊರಗಿನ ಸ್ಥಿತಿಗಳಲ್ಲೂ ಸ್ಥಿರತೆಯನ್ನು ನೀಡುತ್ತದೆ. ಮತ್ತು ಅದರ ಮುಂಬದಿಯಲ್ಲಿರುವ ಟ್ವಿನ್‌-ಪಾಟ್ ಡಿಸ್ಕ್ ಬ್ರೇಕ್‌ಗಳು ಯಾವುದೇ ಲೋಡ್ ಇದ್ದರೂ, ಯಾವುದೇ ರಸ್ತೆಯ ಸ್ಥಿತಿ ಇದ್ದಾಗಲೂ ಉತ್ತಮ ಬ್ರೇಕಿಂಗ್‌ನ ಖಾತರಿ ಕೊಡುತ್ತದೆ.

ಅಧಿಕ ಉಳಿತಾಯ

ಟಾಟಾ ಯೋಧಾ ಪಿಕಪ್ ಸರಣಿಯನ್ನು ವಿಭಾಗದಲ್ಲಿಯೇ ಅತೀ ಕಡಿಮೆ ನಿರ್ವಹಣಾ ವೆಚ್ಚ ಇರುವಂತೆ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ ನಿರ್ವಹಣೆ ಅಗತ್ಯವಿರುವ ಡ್ರೈವ್‌ಲೈನ್ ಜೊತೆಗೆ, ಅದು ಗರಿಷ್ಠ ಉಳಿತಾಯ ಮತ್ತು ಅಧಿಕ ಅಪ್‌ಟೈಮ್ ಕೊಡುತ್ತದೆ.

ಇಂಜಿನ್ ಆಯಿಲ್ ಬದಲಾವಣೆ ವೇಳಾವಧಿಯು 20,000 ಕಿಮೀಗಳಿದ್ದು, ಗೇರ್ ಬಾಕ್ಸ್ ಮತ್ತು ರೇರ್ ಡಿಫರೆನ್ಷಿಯಲ್ ಆಯಿಲ್ ವೇಳಾವಧಿ 80,000 ಕಿಮೀಗಳಿವೆ, ಒಂದು LFL (ಲುಬ್ರಿಕೇಟೆಡ್ ಫಾರ್ ಲೈಫ್) ಪ್ರೊಪೆಲ್ಲರ್ ಶಾಫ್ಟ್ ಮತ್ತು ಗ್ರೀಸಿಂಗ್ ಅಗತ್ಯವಿಲ್ಲದ ಗುಣಲಕ್ಷಣವಿರುವ ಹಬ್ ಮತ್ತು ಸಸ್ಪನ್ಷನ್ ಇರುವ ಕಾರಣ ಶೂನ್ಯ ನಿರ್ವಹಣೆ ವೆಚ್ಚವಿರುತ್ತದೆ ಮತ್ತು ನಿಮಗೆ ಗರಿಷ್ಠ ಉಳಿತಾಯ ಕೊಡುತ್ತದೆ. ಹೆಚ್ಚುವರಿಯಾಗಿ, ನಮ್ಮ 90 ನಿಮಿಷ/ 120 ನಿಮಿಷ ಎಕ್ಸ್‌ಪ್ರೆಸ್ ಸರ್ವಿಸ್ ಆಶ್ವಾಸನೆ ಪ್ರತ್ಯೇಕದ ಜೊತೆಗೆ

ಟಾಟಾ ಯೋಧಾ ಆದ್ಯತೆ ಸರ್ವಿಸ್ ಸಹಾಯವಾಣಿ ಸಂಖ್ಯೆ 1800 209 7979 ಯನ್ನು ಸಾಧ್ಯವಾದಷ್ಟು ಬೇಗನೇ ಮತ್ತೆ ರಸ್ತೆಗೆ ಇಳಿಯಲು ಸಾಧ್ಯವಾಗಲು ನೆರವಾಗಲೆಂದು ರಚಿಸಲಾಗಿದೆ.

ವರ್ಗದಲ್ಲಿಯೇ ಅತೀ ಇಂಧನ ಕ್ಷಮತೆ ಹೊಂದಿದ ಇಂಜಿನ್ ಗಳಾಗಿದ್ದು, ಈ ಸರಣಿಯು ಸ್ಮಾರ್ಟ್‌ ಇಕೋ ಮೋಡ್ ಸ್ವಿಚ್ ಹೊಂದಿದೆ. ಅದು ನಿಮಗೆ ಖಾಲಿ ಪ್ರಯಾಣದ ಸಮಯದಲ್ಲಿ ಇಂಧನ ಉಳಿಸಲು ನೆರವಾಗುತ್ತದೆ ಮತ್ತು ಗೇರ್ ಶಿಫ್ಟ್ ಅಡ್ವೈಸರ್ ಚಾಲಕನಿಗೆ ಎಚ್ಚರಿಕೆ ನೀಡುವ ಮೂಲಕ ಗರಿಷ್ಠ ಮೈಲೇಜ್‌ನ ಖಾತರಿ ಕೊಡುತ್ತದೆ. ಇವು ಮತ್ತು ಇನ್ನೂ ಹೆಚ್ಚಿನ ಅಂಶಗಳು ಪ್ರತೀ ಪ್ರಯಾಣದಲ್ಲೂ ನಿಮಗೆ ಹೆಚ್ಚು ಉಳಿತಾಯವಾಗುವಂತೆ ಮಾಡುತ್ತವೆ.

ಅತ್ಯಧಿಕ ಆರಾಮ ಮತ್ತು ಅನುಕೂಲ

ಟಾಟಾ ಯೋಧಾ ಪಿಕಪ್ ಸರಣಿಯು ನಿಮ್ಮ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ಒಳಗಣ್ಣಿನಿಂದ ವಿನ್ಯಾಸಗೊಳಿಸಲಾಗಿದೆ. ಏರೋಡೈನಾಮಿಕ್ ವಿನ್ಯಾಸದಿಂದ ಆರಂಭಿಸಿ, ಸುವ್-ವಿಧದ ಎತ್ತರದ ನಿಲುವು ಮತ್ತು ಮಸ್ಕ್ಯುಲರ್ ಕ್ಯಾಬಿನ್ ವಿನ್ಯಾಸವಿದೆ. ಬದಿಯ ಬಾಗಿಲುಗಳ ಟ್ರೆಂಡಿ ಡಿಕಾಲ್‌ಗಳಿಂದಾಗಿ ರಸ್ತೆಯ ಮೇಲೆ ಅದರ ಚಾಲನೆ ವಿಶೇಷವಾಗಿ ಗುರುತಿಸಲ್ಪಡುತ್ತಿದೆ.

ಅದಕ್ಕೆ ಸೇರ್ಪಡೆ ಎನ್ನುವಂತೆ, ಕೆಲವು ಆಕರ್ಷಕ ಗುಣಲಕ್ಷಣಗಳಾಗಿರುವ ವಾಲಿಸಬಹುದಾದ ಮತ್ತು ಕೊಲ್ಯಾಪ್ಸ್ ಮಾಡಬಹುದಾದ ಪವರ್ ಸ್ಟೀರಿಂಗ್, ಹೆಡ್‌ರೆಸ್ಟ್‌ಗಳ ಜೊತೆಗೆ ಅನುಕೂಲಕರವಾದ ಬಕೆಟ್ ಸೀಟುಗಳು ಇವೆ, ಹಿಂಬದಿಯಲ್ಲಿ ಜಾರಿಸಬಹುದಾದ ಕಿಟಕಿಗಳು ಕ್ಯಾಬಿನ್‌ನಲ್ಲಿ ಗಾಳಿಯಾಡುವುದಕ್ಕೆ ನೆರವಾಗುತ್ತವೆ, ಬಳಕೆಗೆ ಜಾಗವಿರುವ ಸ್ಟೈಲಿಶ್ ಡ್ಯಾಷ್‌ಬೋರ್ಡ್‌, ಅಂತರ್‌ನಿರ್ಮಿತ ವೇಗವಾಗಿ ಕೆಲಸ ಮಾಡುವ ಮೊಬೈಲ್ ಚಾರ್ಜರ್, ಬಾಟಲಿ ಹೋಲ್ಡರ್, ಸುದ್ದಿಪತ್ರಿಕೆ ಇಡುವ ಪಾಕೆಟ್‌, ಲಾಕ್ ಮಾಡಬಹುದಾದ ಗ್ಲವ್ ಬಾಕ್ಸ್, ಸುಧಾರಿತ ದೃಶ್ಯಕ್ಕಾಗಿ ಅಗಲವಾದ ORVM, ಮತ್ತು ರಿವರ್ಸ್ ಮಾಡುವಾಗ ಗ್ರಾಹಕರಿಗೆ ನೆರವಾಗಲು ರಿವರ್ಸ್ ಪಾರ್ಕಿಂಗ್ ಸಹಾಯ ವ್ಯವಸ್ಥೆ (RSPS) ಮೊದಲಾಗಿ ಟಾಟಾ ಯೋಧಾ ಸರಣಿಯ ಪಿಕಪ್‌ಗಳು ಗರಿಷ್ಠ ಆರಾಮ ಮತ್ತು ಅನುಕೂಲ ನೀಡುವ ಗುಣಲಕ್ಷಣಗಳನ್ನು ಹೊಂದಿವೆ.

ನಿಮ್ಮ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಕಸ್ಟಮೀಕರಿಸಲಾದ ಬಳಕೆಗೆ ಯೋಗ್ಯವಾಗಿ ನಿರ್ಮಾಣ ಮಾಡಲಾದ ಕ್ಯಾಬಿನ್ ಚಾಸಿಯ ಆಯ್ಕೆಯಲ್ಲೂ ಟಾಟಾ ಯೋಧಾ ಪಿಕಪ್ ಸರಣಿಯು ಲಭ್ಯವಿದೆ.

ಯೋಧಾ ಪಿಕಪ್ ಸರಣಿಯು ಭರವಸೆ ನೀಡಲಾದ 3 ವರ್ಷಗಳ ಅಥವಾ 3,00,000 ಕಿಮೀಗಳ (ಯಾವುದು ಮೊದಲು ಬರುತ್ತದೋ ಅದು ಅನ್ವಯ) ಚಾಲನಾ ಅವಧಿ ಪೂರ್ಣಗೊಳ್ಳುವ ವಾರಂಟಿಯನ್ನು ಹೊಂದಿದ್ದು, ವರ್ಗದಲ್ಲಿಯೇ ಅತ್ಯುತ್ತಮ ಕೊಡುಗೆಯಾಗಿದೆ.