Loading...
ಸಂಪೂರ್ಣ ಸೇವಾ 2.0

ಸಂಪೂರ್ಣ
ಸೇವಾ 2.0

ಸಂಪೂರ್ಣ ಸೇವಾ 2.0

ನೀವು ಒಂದು ಟಾಟಾ ಮೋಟಾರ್ಸ್ ಟ್ರಕ್ ಖರೀದಿಸುವಾಗ, ಕೇವಲ ಉತ್ಪನ್ನವನ್ನು ಮಾತ್ರವೇ ಖರೀದಿಸುತ್ತಿಲ್ಲ, ಬದಲಾಗಿ ಸರ್ವಿಸ್ನಿಂದ ಆರಂಭಿಸಿ, ರಸ್ತೆಬದಿ ನೆರವು, ವಿಮೆ, ಪ್ರಾಮಾಣಿಕತೆ ಮತ್ತು ಇನ್ನೂ ಅನೇಕ ರೀತಿಯ ಸೇವೆಗಳನ್ನು ಪಡೆಯುತ್ತೀರಿ. ಈಗ ನೀವು ಸಂಪೂರ್ಣವಾಗಿ ನಿಮ್ಮ ಉದ್ಯಮದ ಕಡೆಗೆ ಗಮನಹರಿಸಬಹುದು ಮತ್ತು ಸಂಪೂರ್ಣ ಸೇವಾ ಉಳಿದ ವಿಚಾರಗಳ ಬಗ್ಗೆ ಗಮನಹರಿಸಲಿ.

ಸಂಪೂರ್ಣ ಸೇವಾ 2.0 ಹೊಚ್ಚ ಹೊಸ ಮತ್ತು ಸುಧಾರಿತ. ನಾವು ಈ ನಿರಂತರವಾಗಿ ಸುಧಾರಣೆಗೊಳ್ಳುತ್ತಿರುವ ಸೇವೆಯನ್ನು ಸೃಷ್ಟಿಸಲು ಕಳೆದ ವರ್ಷ ನಮ್ಮ ಕೇಂದ್ರಗಳಿಗೆ ಭೇಟಿ ನೀಡಿದ ಸುಮಾರು 6.5 ದಶಲಕ್ಷ ಗ್ರಾಹಕರಿಂದ ಅಭಿಪ್ರಾಯ ಪಡೆದಿದ್ದೇವೆ.

29 ರಾಜ್ಯ ಸರ್ವಿಸ್ ಕಚೇರಿಗಳು, 250+ ಟಾಟಾ ಮೋಟಾರ್ಸ್ ಎಂಜಿನಿಯರ್ಗಳು, ಆಧುನಿಕ ಉಪಕರಣ ಮತ್ತು ಸೌಲಬ್ಯಗಳು ಮತ್ತು 24x7 ಮೊಬೈಲ್ ವ್ಯಾನ್ಗಳ ಜೊತೆಗೆ 1500ಕ್ಕೂ ಅಧಿಕ ಸಹಭಾಗಿ ಪಾಲುದಾರರ ನೆರವಿನ ಲಾಭವನ್ನು ನೀವು ಪಡೆದುಕೊಳ್ಳುವಿರಿ.

ಸಂಪೂರ್ಣ ಸೇವಾ 2.0

ಟಾಟಾ ಮೋಟಾರ್ಸ್ ಒದಗಿಸುವ ಸಂಪೂರ್ಣ ಸೇವಾ ನಿಮ್ಮ ಉದ್ಯಮಕ್ಕೆ ಸಿಗುವ ಸಂಪೂರ್ಣ ಆರೈಕೆ ಪ್ಯಾಕೇಜ್ ಆಗಿರುತ್ತದೆ. ನೀವು ವಾಹನವನ್ನು ಖರೀದಿಸಿದಂದಿನಿಂದ ಮತ್ತು ಪ್ರತೀ ಹೆಜ್ಜೆಯಲ್ಲೂ ನಿಮ್ಮ ಉದ್ಯಮದ ಜೊತೆಗಿರುತ್ತದೆ. ಅದು ವಿಮೆ ಅಥವಾ ಬ್ರೇಕ್ಡೌನ್, ಬಹುಮಾನಗಳು ಅಥವಾ ಮಾನ್ಯತೆಹೊಂದಿದ ಬಿಡಿಭಾಗಗಳು, ಮರುಮಾರಾಟ ಅಥವಾ ವಾರಂಟಿ ಮೊದಲಾಗಿ ಸಂಪೂರ್ಣ ಸೇವಾ ಎಲ್ಲವನ್ನೂ ನಿಭಾಯಿಸುತ್ತದೆ. ಈಗ ನೀವು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ಕೇವಲ ನಿಮ್ಮ ಉದ್ಯಮದ ಕಡೆಗೆ ಗಮನಹರಿಸಿ ಮತ್ತು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ.

ಏಕೆಂದರೆ, ಟಾಟಾ ಮೋಟಾರ್ಸ್ ಪ್ರತೀ ಹೆಜ್ಜೆಯಲ್ಲೂ ನಿಮ್ಮ ಜೊತೆಗಿರುತ್ತದೆ.

3 ವರ್ಷಗಳ ವಾರಂಟಿ

ಟಾಟಾ ವಾರಂಟಿ

ಎಲ್ಲಾ ಯೋಧಾ ಪಿಕಪ್‌ಗಳಲ್ಲಿ 3 ವರ್ಷ / 300000 ಕಿ.ಮೀ (ಯಾವುದು ಹಿಂದಿನದು) ಡ್ರೈವ್‌ಲೈನ್ ಖಾತರಿಯೊಂದಿಗೆ, ನಿಮ್ಮ ವ್ಯವಹಾರವನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸಲು ನಾವು ಪ್ರಯತ್ನಿಸುತ್ತೇವೆ.

ಪ್ರಮುಖ ಗುಣಲಕ್ಷಣಗಳು

  • ಟಾಟಾ ಮೋಟಾರ್ಸ್ನ ವಿಸ್ತೃತ ಡೀಲರ್ಶಿಪ್ ಮತ್ತು ಸರ್ವಿಸ್ ಜಾಲದ ಮೂಲಕ 1500+ ಟಚ್ ಪಾಯಿಂಟ್ಗಳ್ಲಿ ದೇಶಾದ್ಯಂತ ಪ್ರತೀ 62ಕಿಮೀಗಳಿಗೆ ಸರ್ವಿಸ್ ಸೌಲಭ್ಯವಿದೆ.
ಟಾಟಾ ಡಿಲೈಟ್

ಟಾಟಾ ಡಿಲೈಟ್

2011 ಫೆಬ್ರವರಿಯಲ್ಲಿ ಆರಂಭಿಸಲಾಗಿರುವ ಟಾಟಾ ಡಿಲೈಟ್ ಭಾರತದಲ್ಲಿ ವಾಣಿಜ್ಯ ವಾಹನಗಳ ಉದ್ಯಮದಲ್ಲಿ ಮೊತ್ತ ಮೊದಲ ಗ್ರಾಹಕ ಪ್ರಾಮಾಣಿಕತೆ ಕಾರ್ಯಕ್ರಮವಾಗಿದೆ. ಟಾಟಾ ವಾಹನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರೂ ಸ್ವಯಂಚಾಲಿತವಾಗಿ ಈ ಪ್ರಾಮಾಣಿಕತೆ ಕಾರ್ಯಕ್ರಮದ ಭಾಗವಾಗುತ್ತಾರೆ.

ಪ್ರಮುಖ ಗುಣಲಕ್ಷಣಗಳು

  • ಟಾಟಾ ಮೋಟಾರ್ಸ್ ಅಧಿಕೃತ ಸರ್ವಿಸ್ ಔಟ್ಲೆಟ್ಗಳು, ಬಿಡಿಭಾಗದ ಔಟ್ಲೆಟ್ ಮತ್ತು ಕಾರ್ಯಕ್ರಮ ಪಾಲುದಾರರಲ್ಲಿ ವ್ಯಯಿಸಿದ ಪ್ರತೀ 1,000/- ಮೇಲೆ ಪ್ರಾಮಾಣಿಕತೆ ಪಾಯಿಂಟ್ಗಳು
  • 5 ವರ್ಷಗಳ ಸದಸ್ಯತ್ವ ಮಾನ್ಯತೆ ಮತ್ತು 3 ವರ್ಷಗಳ ಪಾಯಿಂಟ್ಸ್ ಮಾನ್ಯತೆ
  • ಸದಸ್ಯತ್ವ ಮಾನ್ಯತೆ ಇರುವವರೆಗೆ 10 ಲಕ್ಷದವರೆಗೆ ಅಪಘಾತ ಮರಣ/ ವಿಕಲತೆ ಲಾಭ ಮತ್ತು ರೂ 50 000ದವರೆಗೆ ಅಪಘಾತ ಆಸ್ಪತ್ರೆಯ ಖರ್ಚು
  • 12 ಲಕ್ಷಕ್ಕೂ ಅಧಿಕ ರಿಟೇಲ್ ಗ್ರಾಹಕರು ಈಗಾಗಲೇ ಕಾರ್ಯಕ್ರಮದ ಭಾಗವಾಗಿದ್ದಾರೆ.
ಟಾಟಾ ಒಕೆ ಯಶಸ್ಸಿನ ಮೊದಲ ಹೆಜ್ಜೆ

ಟಾಟಾ ಒಕೆ

ಟಾಟಾ ಒಕೆ ಮೂಲಕ, ಮೊದಲೇ ಮಾಲೀಕತ್ವದಲ್ಲಿರುವ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಬಹುದು ಅಥವಾ ಖರೀದಿಸಬಹುದು. ನಾವು ಪ್ರತೀ ಹಂತದ ಪಡೆಯುವಿಕೆ ಮತ್ತು ಖರೀದಿ, ಮೌಲ್ಯನಿರ್ಣಯ, ನವೀಕರಣ ಮತ್ತು ನವೀಕರಿಸಿದ ವಾಹನಗಳ ಮಾರಾಟದಲ್ಲಿ ಭಾಗಿಯಾಗಿದ್ದು, ಯಾವುದೇ ದುರುಪಯೋಗವನ್ನು ನಿಯಂತ್ರಿಸುತ್ತೇವೆ.

ಪ್ರಮುಖ ಗುಣಲಕ್ಷಣಗಳು

  • ನಿಮ್ಮ ಈಗಿನ ವಾಣಿಜ್ಯ ವಾಹನಕ್ಕೆ ಅತ್ಯುತ್ತಮ ಮರುಮಾರಾಟ ಬೆಲೆ ಪಡೆಯಿರಿ
  • ನಿಮ್ಮ ಬಾಗಿಲ ಬಳಿಯೇ ಮೌಲ್ಯನಿರ್ಣಯ
  • ಟಾಟಾ ಒಕೆ ಪ್ರಾಮಾಣಿತ ವಾಹನಗಳ ಮೇಲೆ 80% ಹಣಕಾಸು ನೆರವು ಪಡೆಯಿರಿ
  • ಟಾಟಾ ಒಕೆ ಪ್ರಾಮಾಣಿತ ಪೂರ್ವ-ಮಾಲೀಕತ್ವದ ವಾಹನಗಳಿಗೆ ವಾರಂಟಿ
ಟಾಟಾ ಮಾನ್ಯತೆ ಹೊಂದಿದ ಭಾಗಗಳು

ಟಾಟಾ ಮಾನ್ಯತೆ ಹೊಂದಿದ ಭಾಗಗಳು

ಟಾಟಾ ವಾಣಿಜ್ಯ ವಾಹನಗಳನ್ನು ವರ್ಷಗಳ ಕಾಲ ಅತ್ಯುತ್ತಮ ಸ್ಥಿತಿಯಲ್ಲಿ ಉಳಿಸಿಕೊಳ್ಳಲು, ನಾವು ಟಾಟಾ ಮಾನ್ಯತೆ ಹೊಂದಿದ ಭಾಗಗಳನ್ನು (ಟಿಜಿಪಿ) ಒದಗಿಸುತ್ತೇವೆ. ಟಾಟಾ ಮೋಟಾರ್ಸ್ನ ವಿಭಾಗವಾಗಿರುವ, ಟಿಜಿಪಿಯು 1.5 ಲಕ್ಷ ಎಸ್ಕೆಯುಗಳಲ್ಲಿ ಬಿಡಿಭಾಗಗಳನ್ನು ಟಾಟಾ ವಾಣಿಜ್ಯ ವಾಹನಗಳ ನಿರ್ವಹಣೆಗಾಗಿ ಒದಗಿಸುತ್ತದೆ. ಈ ಪ್ರತೀ ಬಿಡಿಭಾಗಗಳನ್ನು ನಿಖರವಾದ ವಾಹನ ನಿರ್ದಿಷ್ಟತೆಗಳಲ್ಲಿ ಪರೀಕ್ಷಿಸಿ, ವಿವಿಧ ಗುಣಮಟ್ಟ ಪರೀಕ್ಷೆ, ಪರಿಪೂರ್ಣ ಜೋಡಣೆಯಾಗುವುದು, ಸರ್ವಿಸ್ ಅವಧಿ ಹೆಚ್ಚಾಗಿ ಧೀರ್ಘಕಾಲ ಬಾಳಿಕೆ, ಮತ್ತು ಧೀರ್ಘ ದೂರಗಳ ಕಾಲ ವಾಹನ ಚಲಾಯಿಸಲು ಸಾಧ್ಯವಾಗುವಂತೆ ಗಮನದಲ್ಲಿರಿಸಿ ತಯಾರಿಸಲಾಗಿದೆ.

ಪ್ರಮುಖ ಗುಣಲಕ್ಷಣಗಳು

  • 230 ವಿತರಣಾ ಕೇಂದ್ರಗಳು ಮತ್ತು 20,000 ಕ್ಕೂ ಅಧಿಕ ರಿಟೇಲ್ ಔಟ್ಲೆಟ್ಗಳೊಂದಿಗೆ ಐದು ಗೋದಾಮುಗಳು ಸೇರಿದ ವಿತರಣಾ ಜಾಲ
  • ಪ್ರತೀ ಟಾಟಾ ಮಾನ್ಯತೆ ಹೊಂದಿದ ಭಾಗಗಳ ಉತ್ಪನ್ನವನ್ನು ಇತರ ಯಾವುದೇ ಮಾನ್ಯತೆಯಿಲ್ಲದ ಬಿಡಿಭಾಗಕ್ಕಿಂತ ಧೀರ್ಘಕಾಲ ಬಾಳಿಕೆಗಾಗಿ ಮತ್ತು ಸರ್ವಿಸ್ ಅವಧಿಗೆ ಒದಗಿಸಲಾಗುತ್ತದೆ
  • ಪ್ರತೀ ಭಾಗವನ್ನು ನಿಖರ ವಾಹನ ನಿರ್ದಿಷ್ಟತೆಗಳಿಗೆ ಅನುಸಾರವಾಗಿ ವಿನ್ಯಾಸಗೊಳಿಸಿರುವುದಲ್ಲದೆ, ಹಲವು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳನ್ನೂ ದಾಟಬೇಕಿದೆ.
ಟಾಟಾ ಸುರಕ್ಷಾ

TATA Suraksha

ಒಂದು ವಾರ್ಷಿಕ ನಿರ್ವಹಣಾ ಪ್ಯಾಕೇಜ್ ಆಗಿದ್ದು, ಸಂಪೂರ್ಣ ಮುಂಜಾಗರೂಕತೆ ಮತ್ತು ನಿಗದಿತ ನಿರ್ವಹಣೆಯ ಕಡೆಗೆ ಗಮನಹರಿಸುತ್ತದೆ ಮತ್ತು ವಾಹನದ ಡ್ರೈವ್ಲೈನ್ನ ಬ್ರೇಕ್ಡೌನ್ ರಿಪೇರಿಗಳನ್ನು ಪೂರ್ವನಿರ್ಧರಿತ ಬೆಲೆಗೆ ಮಾಡುತ್ತದೆ. ಸದ್ಯ ಭಾರತದಾದ್ಯಂತ 60,000+ ಗ್ರಾಹಕರು ಟಾಟಾ ಸುರಕ್ಷೆಯನ್ನು ಹೊಂದಿದ್ದಾರೆ. 3 ವರ್ಷಗಳ ಒಪ್ಪಂದಗಳು ಎಸ್ಸಿವಿ ಕಾರ್ಗೋ ಮತ್ತು ಪಿಕಪ್ಗಳಿಗೆ ಲಭ್ಯವಿರುತ್ತದೆ.

ಪ್ಯಾಕೇಜ್ಗಳು ಮತ್ತು ಸೇರ್ಪಡೆಗಳು

  • ಪ್ಲಾಟಿನಂ ಪ್ಲಸ್: ಬಾಗಿಲ ಬಳಿ ಅನುಕೂಲಕರ ರಕ್ಷಣೆ
  • ಪ್ಲಾಟಿನಂ: ಅನುಕೂಲಕರ ರಕ್ಷಣೆ
  • ಗೋಲ್ಡ್: ಇತರ ರಿಪೇರಿಗಳ ಮೇಲೆ ಮುಂಜಾಗರೂಕತಾ ನಿರ್ವಹಣೆ + ಕಾರ್ಮಿಕ ವೆಚ್ಚ
  • ಸಿಲ್ವರ್: ಮುಂಜಾಗರೂಕತಾ ನಿರ್ವಹಣೆ ರಕ್ಷಣೆ
  • ಬ್ರೋಂಜ್: ಕಾರ್ಮಿಕ ವೆಚ್ಚ

*ಟಾಟಾ ಸುರಕ್ಷಾ ವಾಸ್ತವ ಕೊಡುಗೆಯ ಪ್ಯಾಕೇಜ್ಗಳನ್ನು ಸಂಬಂಧಿತ ಡೀಲರ್ಶಿಪ್ನಲ್ಲಿ ಪರಿಶೀಲಿಸಬಹುದು.
ಟಾಟಾ ಅಲರ್ಟ್

ಟಾಟಾ ಅಲರ್ಟ್

ನಮ್ಮ 24x7 ರಸ್ತೆಬದಿಯ ನೆರವು ಕಾರ್ಯಕ್ರಮವು ಎಲ್ಲಾ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನ ಮಾದರಿಗಳಿಗೆ ಖಾತರಿ ಅವಧಿಯಲ್ಲಿ, ದೇಶದಾದ್ಯಂತ ಎಲ್ಲಿಯಾದರೂ, ಸ್ಥಳವನ್ನು ಲೆಕ್ಕಿಸದೆ 24 ಗಂಟೆಗಳ ಒಳಗೆ ರೆಸಲ್ಯೂಶನ್ ಭರವಸೆ ನೀಡುತ್ತದೆ.

ಪ್ರಮುಖ ಗುಣಲಕ್ಷಣಗಳು

  • ಜ್ಞಾಪನೆಯ ಸಮಯ 30 ನಿಮಿಷಗಳು
  • ನಮ್ಮ ತಂಡವು 2 ಗಂಟೆಗಳ ಒಳಗೆ ಹಗಲಿನ ವೇಳೆ (ಬೆಳಿಗ್ಗೆ 6 ರಿಂದ ರಾತ್ರಿ 10) ಮತ್ತು ರಾತ್ರಿ ವೇಳೆ 4 ಗಂಟೆಗಳ ಒಳಗೆ (ರಾತ್ರಿ 10 ರಿಂದ ಬೆಳಿಗ್ಗೆ 6) ನಿಮ್ಮನ್ನು ತಲುಪಲಿದೆ.
  • ಯಾವುದೇ ವಿಳಂಬವಾದಲ್ಲಿ, ಪರಿಹಾರವಾಗಿ ನಿಮಗೆ ರೂ. 500/ ದಿನಕ್ಕೆ ನೀಡಲಾಗುವುದು
  • ಮುಂದಿನ ಟಿಜಿಪಿ ಮತ್ತು ಪ್ರೊಫೈಲ್ ಸಾಮಗ್ರಿಗಳ ಜೊತೆಗೆ ಇದನ್ನು ರಿಡೀಮ್ ಮಾಡಿಕೊಳ್ಳಬಹುದು.

* ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ

ಟಾಟಾ ಕವಚ್

ಟಾಟಾ ಕವಚ್

ಸಾಧ್ಯವಿರುವ ಅತೀ ಕಡಿಮೆ ಅವಧಿಯಲ್ಲಿ ಅಪಘಾತ ರಿಪೇರಿ ಸೌಲಭ್ಯವನ್ನು ಕೊಡುವ ಮೂಲಕ ನಿಮ್ಮ ಉದ್ಯಮ ಎಂದೂ ಹಳಿತಪ್ಪದಂತೆ ಟಾಟಾ ಕವಚ್ ಖಚಿತಪಡಿಸುತ್ತದೆ. ಟಾಟಾ ಮೋಟಾರ್ಸ್ ವಿಮೆಯ ರಕ್ಷಣೆ ಪಡೆದ ವಾಹನಗಳಿಗೆ ಆಯ್ದ ವರ್ಕ್ಶಾಪ್ಗಳಲ್ಲಿ ಮಾತ್ರವೇ ಇದು ಲಭ್ಯವಿದೆ.

ಪ್ರಮುಖ ಗುಣಲಕ್ಷಣಗಳು

  • 15 ದಿನಗಳಲ್ಲಿ ರಿಪೇರಿ ಮಾಡುತ್ತದೆ ಅಥವಾ ತಪ್ಪಿದಲ್ಲಿ ನಂತರ ದಿನಕ್ಕೆ ರೂ 500 ಪರಿಹಾರವನ್ನು ಗ್ರಾಹಕರಿಗೆ ವಿಳಂಬವಾದ ಡೆಲಿವರಿಗೆ ನಿಡುತ್ತದೆ.
  • ಟಿಎಂಎಲ್- ಅಧಿಕೃತ ಅಪಘಾತ ವಿಶೇಷ ವರ್ಕ್ಶಾಪ್ಗಳಿಗೆ ಹೋಗುವ ವಾಹನಗಳಿಗೆ ಮಾತ್ರವೇ ಅಪಘಾತ ರಿಪೇರಿ ಸೌಲಭ್ಯ ಸಿಗುತ್ತದೆ.
  • 15 ದಿನಗಳಲ್ಲಿ ರಿಪೇರಿ ಮಾಡದೆ ಇದ್ದಲ್ಲಿ ಪರಿಹಾರವು ವಿಳಂಬವಾದ 24 ಗಂಟೆಗಳಿಗೆ ದುಪ್ಪಟ್ಟಾಗುತ್ತದೆ.
  • ಸುಲಭವಾಗಿ ಕರೆಗಳನ್ನು ಮಾಡಬಹುದು ಮತ್ತು ಟಾಟಾ ಮೋಟಾರ್ಸ್ ವಿಮೆ ಉಚಿತ ಸಂಖ್ಯೆ 1800 209 0060 ಮೂಲಕ ನೋಂದಣಿ ಮಾಡಿಕೊಳ್ಳಬಹುದು.

* ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ

ಟಾಟಾ ಮೋಟಾರ್ಸ್ ಪ್ರೊಫೈಲ್

ಟಾಟಾ ಮೋಟಾರ್ಸ್ ಪ್ರೊಫೈಲ್

ಟಾಟಾ ಮೋಟಾರ್ಸ್ ಪ್ರೊಫೈಲ್ ನಿಮಗೆ ಮರು ತಯಾರಿಸಿದ ಎಂಜಿನ್ಗಳನ್ನು ವಿನಿಮಯ ಆಧಾರದಲ್ಲಿ ಎರಡೂ ವಾಹನ ಡೌನ್ಟೌನ್ ಮತ್ತು ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡಲೆಂದು ನೀಡುತ್ತದೆ.

ಪ್ರಮುಖ ಗುಣಲಕ್ಷಣಗಳು

  • ಇಂಜಿನ್ ಲಾಂಗ್ ಬ್ಲಾಕ್, ಕ್ಲಚ್ ಮತ್ತು ಕ್ಯಾಬಿನ್ ಸೇರಿದಂತೆ ಮರು ತಯಾರಿಸಿದ ಸಾಮಗ್ರಿಗಳು ಹೊಸ ಬಿಡಿಭಾಗಗಳ 40% ರಿಂದ 80% ನಡುವಿನ ಮಾರುಕಟ್ಟೆ ದರದಲ್ಲಿ 75 ಉತ್ಪನ್ನಗಳಷ್ಟು ಶ್ರೇಣಿಯಲ್ಲಿ ಸಿಗುತ್ತದೆ.
  • ಅವುಗಳನ್ನು ಯಾವುದೇ ಮರು ತಯಾರಿಸಿದ ಅಥವಾ ಮೆಟೀರಿಯಲ್ ದೋಷವಿರುವುದರ ವಿರುದ್ಧ ವಾರಂಟಿ ನೀಡಲಾಗುತ್ತದೆ
ಟಾಟಾ ಜಿಪ್ಪಿ

ಟಾಟಾ ಜಿಪ್ಪಿ

ಟಾಟಾ ಜಿಪ್ಪಿ ಎಲ್ಲಾ ಬಿಎಸ್6 ವಾಹನಗಳಿಗೆ ನೀಡಲಾದ ಒಂದು ರಿಪೇರಿ ಸಮಯ ಖಾತರಿ ಕಾರ್ಯಕ್ರಮವಾಗಿದೆ. ಉಚಿತ ಸಂಖ್ಯೆಯ ಮೂಲಕ ಅಥವಾ ವರ್ಕ್ಶಾಪ್ನಲ್ಲಿ ವರದಿ ಮಾಡಲಾದ ಯಾವುದೇ ಸಮಸ್ಯೆಗೆ ಮಾರಾಟ ನಂತರದ 12 ತಿಂಗಳು ಅಥವಾ ವಾಹನ ತಯಾರಿಸಿದ 14 ತಿಂಗಳುಗಳ ನಂತರ, ಯಾವುದು ಮೊದಲು ಬರುತ್ತದೋ ಅದಕ್ಕೆ ಸಂಬಂಧಿಸಿ ವೇಗದ ಸರ್ವಿಸ್ನ ಖಾತರಿ ನೀಡಲಾಗುತ್ತದೆ.

ಪ್ರಮುಖ ಗುಣಲಕ್ಷಣಗಳು

  • ನಿತ್ಯದ ಸರ್ವಿಸ್ಗೆ 8 ಗಂಟೆಗಳ ಒಳಗೆ ಮತ್ತು ಪ್ರಮುಖ ಸಾಮಗ್ರಿಗಳ ರಿಪೇರಿಯನ್ನು 24 ಗಂಟೆಗಳ ಒಳಗೆ ವರ್ಕ್ಶಾಪ್ನಲ್ಲಿ ಸಮಸ್ಯೆ ನಿವಾರಣೆಯ ಖಾತರಿ ನೀಡಲಾಗಿದೆ.
  • ವಿಳಂಬದ ಸಂದರ್ಭದಲ್ಲಿ, ಒಂದು ನಿತ್ಯದ ಪರಿಹಾರವಾಗಿ ದಿನಕ್ಕೆ 500 ರೂಪಾಯಿಯನ್ನು ಎಲ್ಲಾ ಎಸ್ಸಿವಿ ಕಾರ್ಗೋ ಮತ್ತು ಪಿಕಪ್ ಟ್ರಕ್ಗಳಿಗೆ ವರ್ಕ್ಶಾಪ್ನಲ್ಲಿ ಬಂದ ವಾರಂಟಿ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ನೀಡಲಾಗುತ್ತದೆ. ಪರಿಹಾರ ಪಾವತಿ ವಿಳಂಬವಾದ 24 ಗಂಟೆಗಳಲ್ಲಿ ಆರಂಭವಾಗುತ್ತದೆ.

* ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ