Loading...

ಗೌಪ್ಯತೆ ನೊಟೀಸ್ ನೀತಿ

ಟಾಟಾ ಮೋಟಾರ್ಸ್ ಲಿಮಿಟೆಡ್ ( ಇಲ್ಲಿಂದ ಮುಂದೆ ಟಿಎಂಎಲ್‌ ಎಂದು ಕರೆಯಲಾಗುವುದು) ನಿಮ್ಮ ಖಾಸಗಿ ದತ್ತಾಂಶದ ಖಾಸಗಿತನ ಮತ್ತು ಭದ್ರತೆ ರಕ್ಷಣೆ ಮಾಡುವುದಕ್ಕೆ ಬದ್ಧವಾಗಿದೆ. ನಿಮ್ಮ ಖಾಸಗಿ ಡಾಟಾವನ್ನು ಪ್ರಕ್ರಿಯೆಗೊಳಿಸುವ ಸಂದರ್ಭದಲ್ಲಿ ಖಾಸಗಿತನದ ರಕ್ಷಣೆಗೆ ಅತಿಮುಖ್ಯ ಕಾಳಜಿ ನೀಡಿ ವಿಶೇಷವಾಗಿ ಗಮನಹರಿಸಲಾಗುತ್ತದೆ. ನಾವು ಸಂಗ್ರಹಿಸಿದ ಖಾಸಗಿ ಡಾಟಾವನ್ನು ಅನ್ವಯಿಸುವ ಕಾನೂನು ಸೌಲಭ್ಯಗಳಿಗೆ ತಕ್ಕಂತೆ ಪ್ರಕ್ರಿಯೆಗೊಳಿಸುತ್ತೇವೆ.

ಗೌಪ್ಯತೆ ನೀತಿಯ ಅತಿ ಮುಖ್ಯ ಉದ್ದೇಶವೇ ನಾವು ಸಂಗ್ರಹಿಸಿದ ಖಾಸಗಿ ಡಾಟಾದ ಬಗ್ಗೆ ನಿಮಗೆ ಮಾಹಿತಿ ನೀಡುವುದು. ಅಂತಹ ಡಾಟಾವನ್ನು ಸಂಗ್ರಹಿಸುವ ಉದ್ದೇಶ ಮತ್ತು ಅದರ ಬಳಕೆ, ಅಂತಹ ಡಾಟಾವನ್ನು ಪ್ರಕ್ರಿಯೆಗೊಳಿಸುವುದು ಮತ್ತು ನಮ್ಮೊಂದಿಗೆ ಹಂಚಿದ ಅಂತಹ ಖಾಸಗಿ ಡಾಟಾದ ಕುರಿತು ನಿಮ್ಮ ಹಕ್ಕುಗಳನ್ನು ರಕ್ಷಿಸುವುದು ಆಗಿದೆ. ಈ ಗೌಪ್ಯತೆ ನೀತಿ ಮುಂದುವರಿದು ನಿಮ್ಮ ಖಾಸಗಿ ಡಾಟಾ ರಕ್ಷಣೆಗೆ ಸಂಬಂಧಿಸಿದ ನಿಮ್ಮ ಹಕ್ಕುಗಳನ್ನು ಮುಂದಿಡುತ್ತದೆ. ಈ ಖಾಸಗಿ ನೀತಿಯು ಟಿಎಂಎಲ್ ಸಂಗ್ರಹಿಸುವ ನಿಮ್ಮ ಕುರಿತ ಮಾಹಿತಿ, ಆ ಮಾಹಿತಿಯನ್ನು ಹೇಗೆ ಬಳಸುವುದು, ನಿರ್ವಹಣೆ, ಹಂಚಿಕೊಳ್ಳುವುದು, ರಕ್ಷಿಸುವುದು ಮತ್ತು ನೀವು ಅದನ್ನು ಹೇಗೆ ಅಪ್‌ಡೇಟ್ ಮಾಡುವುದು ಎನ್ನುವುದನ್ನು ವಿವರಿಸುತ್ತದೆ. ಟಿಎಂಎಲ್ ಯುರೋಪಿಯನ್ ಆರ್ಥಿಕ ಕ್ಷೇತ್ರದಿಂದ (ಇಇಎ) ಯಾವುದೇ ರೀತಿಯಲ್ಲಿ, ಎಲೆಕ್ಟ್ರಾನಿಕ್ ಅಥವಾ ಕಾಗದದ ಮೂಲಕ, ಪಡೆದ ಎಲ್ಲಾ ಖಾಸಗಿ ನೀತಿಗೂ ಇದು ಅನ್ವಯಿಸುತ್ತದೆ. ಕೆಳಗೆ ಪೋಸ್ಟ್ ಮಾಡಿದ ದಿನಾಂಕದಿಂದ ಇದು ಅನ್ವಯಿಸುತ್ತದೆ ಮತ್ತು ಅನ್ವಯಿಸುವ ದಿನದಿಂದ ಮಾಹಿತಿಯನ್ನು ನಾವು ಬಳಸುವುದಕ್ಕೆ ಅವಕಾಶ ಕೊಡುತ್ತದೆ.

ಗೌಪ್ಯತೆ ನೀತಿಯಲ್ಲಿ ನೀಡದೆ ಇರುವ ಹೊರತಾಗಿ ಸಾಮಾನ್ಯವಾಗಿ, ನೀವು ನಿಮ್ಮ ಖಾಸಗಿ ಗುರುತಿನ ಹೊರತಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿಕೊಡುವುದು/ ಬಳಸಬಬಹುದು. ಟಿಎಂಎಲ್ ನಿಮಗೆ ನಿಮ್ಮ ಗುರುತು ನೀಡದೆಯೇ ವೆಬ್‌ಸೈಟ್ ಬಳಸುವ ಆಯ್ಕೆ ಕೊಡುತ್ತದೆ, ಅದು ಕಾನೂನಾತ್ಮಕ ಮತ್ತು ಪ್ರಾಯೋಗಿಕವಾಗಿರುತ್ತದೆ. ವೆಬ್‌ಸೈಟ್‌ನ ನಿರ್ದಿಷ್ಟ ವಿಭಾಗಗಳಿಗೆ ನಿಮ್ಮ ಅಗತ್ಯವನ್ನು ಸಮರ್ಥವಾಗಿ ಒದಗಿಸಲು ಮತ್ತು ನೀವು ಭೇಟಿ ನೀಡಿದ ಸಮಯದಲ್ಲಿ ನೀವು ವಿನಂತಿಸಿದ ಉತ್ಪನ್ನಗಳು, ಸೇವೆಗಳು ಅಥವಾ ಮಾಹಿತಿಗೆ ಸಂಬಂಧಿಸಿ ಸೂಕ್ತವಾಗಿ ಮಾಹಿತಿ ಒದಗಿಸಲು ನಿಮ್ಮ ಖಾಸಗಿ ಡಾಟಾದ ಅಗತ್ಯ ಬರಬಹುದು. ನಮ್ಮ ವೆಬ್‌ಸೈಟ್ ಬಳಕೆಗೆ ಸಂಬಂಧಿಸಿ ಕೆಳಗೆ ಸೂಚಿಸಿದಂತೆ ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ನಿಮಗೆ ವಿನಂತಿಸಲಾಗಿದೆ. ವೆಬ್‌ಸೈಟ್‌ನ ಬಳಕೆಯಲ್ಲಿ ನೀವು ಈ ನಿಯಮಗಳನ್ನು ಬೇಷರತ್ ಆಗಿ ಒಪ್ಪಬೇಕು ಎಂದು ಹೇಳಲಾಗಿದೆ. ನಮ್ಮ ಗೌಪ್ಯತೆ ನೀತಿಯ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಲ್ಲಿ ಮಾತ್ರವೇ ಈ ವೆಬ್‌ಸೈಟನ್ನು ಪ್ರವೇಶಿಸಬೇಕು. ಅಲ್ಲದೆ ಟಾಟಾ ಮೋಟಾರ್ಸ್ ಲಿಮಿಟೆಡ್‌ಗೆ ನೀವು ಒದಗಿಸಿದ ಎಲ್ಲಾ ಖಾಸಗಿ ವಿಷಯಗಳನ್ನು ಖಾಸಗಿ ನೀತಿಗೆ ತಕ್ಕಂತೆ ಬಳಸಿಕೊಳ್ಳಲು ನೀವು ಸ್ವಯಂ ನಿರ್ಧಾರದಿಂದ ಒಪ್ಪಿಗೆ ನೀಡಿರಬೇಕು. ನಮ್ಮ ಖಾಸಗಿ ನೀತಿಯ ನಿಯಮಗಳನ್ನು ನೀವು ಒಪ್ಪದೆ ಇದ್ದಲ್ಲಿ, ಅಥವಾ ವೆಬ್‌ಸೈಟ್‌ಗಳಿಗೆ ಸಂಬಂಧಿಸಿ ಯಾವುದೇ ಕಾರಣದಿಂದ ನೀವು ಅತೃಪ್ತರಾಗಿದ್ದಲ್ಲಿ/ ಅಥವಾ ಅಲ್ಲಿನ ಯಾವುದೇ ವಿಚಾರದಲ್ಲಿ ನೀವು ವಬ್‌ಸೈಟನ್ನು ಹೆಚ್ಚುವರಿಯಾಗಿ ಬಳಸುವುದನ್ನು ತಡೆಯಲಾಗಿದೆ.

ಈ ಗೌಪ್ಯತೆ ನೀತಿ ಓದುವಂತೆ ನಾವು ನಿಮಗೆ ಪ್ರೋತ್ಸಾಹ ನೀಡುತ್ತೇವೆ.

ನಾವು ಸಂಗ್ರಹಿಸುವ ಖಾಸಗಿ ಡಾಟಾ

ಖಾಸಗಿ ಡಾಟಾವು ಟಿಎಂಎಲ್ ನೀವು ಯಾರು ಎಂದು ತಿಳಿದುಕೊಳ್ಳಲು ಮತ್ತು ಅದನ್ನು ನಿಮ್ಮನ್ನು ಗುರುತಿಸಲು, ಸಂಪರ್ಕಿಸಲು ಅಥವಾ ಪತ್ತೆ ಮಾಡಲು (ಉದಾ. ಹೆಸರು, ವಯಸ್ಸು, ಲಿಂಗ, ಮೈಲಿಂಗ್ ವಿಳಾಸ, ಟೆಲಿಫೋನ್ ನಂಬರ್ ಮತ್ತು ಇಮೇಲ್ ವಿಳಾಸ) ನೆರವಾಗುತ್ತದೆ. ಸಮೀಕ್ಷೆಗೆ ಪ್ರತಿಕ್ರಿಯೆಯಾಗಿ ನೀವು ಖಾಸಗಿ ಮಾಹಿತಿ ದಾಖಲಿಸಿದರೆ, ಕಾರ್ಯಕ್ರಮಗಳಿಗೆ ನೋಂದಣಿ ಮಾಡಿಕೊಂಡಿದ್ದಲ್ಲಿ, ಖಾಸಗಿ ಸೇವೆಗಳಿಗೆ ನೋಂದಣಿ ಮಾಡಿಕೊಮಡಲ್ಲಿ, ಉತ್ಪನ್ನದ ಮಾಹಿತಿ ಬೇಡಿದಾಗ ಅಥವಾ ನಮ್ಮ ಸೇವೆಗಳನ್ನು ಬಳಸಿದಾಗ ಅಥವಾ ಗ್ರಾಹಕ ಸೇವೆಯನ್ನು ಬಯಸಿ ನಿಮ್ಮ ಖಾಸಗಿ ಮಾಹಿತಿಯನ್ನು ನೀವು ಒದಗಿಸಿದಾಗ ನಾವು ಸಂಗ್ರಹಿಸುತ್ತೇವೆ. ನಾವು ನಿಮ್ಮ ಖಾಸಗಿ ಮಾಹಿತಿಯಲ್ಲಿ ನಿಮ್ಮ ಹೆಸರು, ವಿಳಾಸ, ಜಿಪ್ ಕೋಡ್, ಫೋನ್ ನಂಬರ್, ಇಮೇಲ್ ವಿಳಾಸ, ಐಪಿ ವಿಳಾಸ, ಸ್ಥಳ ವಿವರ, ನಿಮ್ಮ ಸಾಧನದ ಮಾಹಿತಿ ಇತ್ಯಾದಿಯನ್ನು ಸಂಗ್ರಹಿಸಬಹುದು. ಟಿಎಂಎಲ್ ಸಂಗ್ರಹಿಸಿರುವ ನಿಮ್ಮ ಎಲ್ಲಾ ಖಾಸಗಿ ವಿವರಗಳು ನೇರವಾಗಿ ನಿಮ್ಮಿಂದಲೇ ಬಂದಿರಬೇಕು ಎಂದಿಲ್ಲ. ಅದನ್ನು ,ಉದಾಹರಣೆಗೆ, ನಿಮ್ಮ ಉದ್ಯೋಗಿಯಿಂದ ಅಥವಾ ನೀವು ಸೇರಿರುವ ಸಂಸ್ಥೆಯಿಂದ ಬಂದಿರಬಹುದು. ಆದರೆ, ಟಿಎಂಎಲ್ ನಿಮ್ಮ ಖಾಸಗಿ ಮಾಹಿತಿಯನ್ನು ಈ ಸೈಟ್ ಜೊತೆಗೆ ಸಂಪರ್ಕ ಸಾಧಿಸಿದಾಗ ಮತ್ತು/ ಅಥವಾ ಈ ಸೈಟ್‌ನಲ್ಲಿ ನೀಡಲಾದ ಸೇವೆಯನ್ನು ಬಳಸಿಕೊಂಡಾಗ ಸಂಗ್ರಹಿಸುತ್ತದೆ.

  • ನೀವು ಉದ್ಯೋಗಕ್ಕೆ ಅರ್ಜಿ ಹಾಕಿದಲ್ಲಿ ಅಥವಾ ಇತರ ಉದ್ಯೋಗ ಸಂಬಂಧಿತ ವಿವರಗಳಿಗೆ ಈ ಸೈಟ್ ಮೂಲಕ ಅರ್ಜಿ ಹಾಕಿದಾಗ ನಿಮ್ಮ ವ್ಯಕ್ತಿ ವಿವರವನ್ನು ಸಲ್ಲಿಸಲಿ ಹೇಳಲಾಗುವುದು ಮತ್ತು ಇತರ ಸಂಪರ್ಕ ಮಾಹಿತಿಯಾದ ನಿಮ್ಮ ಇಮೇಲ್ ವಿಳಾಸ, ಫೋನ್ ಸಂಖ್ಯೆ ಮತ್ತು ಮೈಲಿಂಗ್ ವಿಳಾಸವನ್ನು ಸಲ್ಲಿಸಲು ಕೇಳಲಾಗುವುದು. ಈ ಮಾಹಿತಿಯನ್ನು ನೀವು ನಿರ್ದಿಷ್ಟವಾಗಿ ಸೂಚಿಸಿದ ಉದ್ಯೋಗಕ್ಕೆ ನಿಮ್ಮನ್ನು ಪರಿಗಣಿಸಲು ನಾವು ಬಳಸಿಕೊಳ್ಳುತ್ತೇವೆ. ನಾವು ಈ ಮಾಹಿತಿಯನ್ನು ಇತರ ಉದ್ಯೋಗಾವಕಾಶಗಳಿಗೆ ನಿಮ್ಮನ್ನು ಸಂಪರ್ಕಿಸಲೂ ಬಳಸಬಹುದು. ಎರಡೂ ಅವಕಾಶಗಳನ್ನು ಈ ಸೈಟ್‌ನಲ್ಲಿ ಜಾಹೀರಾತು ನೀಡಲಾಗುತ್ತದೆ.
  • ಸೈಟ್‌ನ ಕೆಲವು ಲಕ್ಷಣಗಳಿಗೆ ಸಂಬಂಧಿಸಿ ತೃತೀಯ ಪಕ್ಷದ ಸೇವೆ ಒದಗಿಸುವವರನ್ನು ನಾವು ಬಳಸಿಕೊಳ್ಳಬಹುದು. ನಮ್ಮ ಸೇವೆ ಒದಗಿಸುವವರು ನಿಮ್ಮ ಮಾಹಿತಿಯನ್ನು ನಮ್ಮ ಪರವಾಗಿ ಪಡೆದುಕೊಳ್ಳಲಿದ್ದಾರೆ ಮತ್ತು ಯಾವುದೇ ಇತರ ಉದ್ದೇಶಕ್ಕೆ ಅದನ್ನು ಬಳಸಲು ಅವಕಾಶ ಹೊಂದಿರುವುದಿಲ್ಲ.
  • ಈ ವೆಬ್‌ಸೈಟ್ ಜೊತೆಗೆ ನಿಮ್ಮ ಸಂಪರ್ಕಕ್ಕೆ ಸಂಬಂಧಿಸಿ ಖಾಸಗಿ ಮಾಹಿತಿಯನ್ನೂ ನಾವು ಕೇಳಬಹುದು. ನೀವು ಸಮೀಕ್ಷೆಯೊಂದಕ್ಕೆ ಉತ್ತರಿಸಿದಾಗಲೂ ಮತ್ತು ನೀವು ಸಮಸ್ಯೆಯೊಂದನ್ನು ಸೈಟ್ ಜೊತೆಗೆ ಹಂಚಿಕೊಂಡಾಗ ಅಥವಾ ಸೈಟ್‌ನಲ್ಲಿ ನೀಡಲಾಗುವ ಸೇವೆಗಳನ್ನು ಬಳಸಿಕೊಂಡಾಗ ನಿಮ್ಮ ಖಾಸಗಿ ಮಾಹಿತಿ ಕೇಳಬಹುದು.
  • ಡೀಲರ್‌ಶಿಪ್‌/ ವಿತರಣೆ ಮೂಲಕ (ಡೀಲರ್‌/ ವಿತರಕ ಅಪ್ಲಿಕೇಶನ್‌ಗಳ ಮೂಲಕ ) ನಮ್ಮೊಂದಿಗೆ ಉದ್ಯಮ ವ್ಯವಹಾರಕ್ಕೆ ಬಯಸಿದರೆ ನಿಮ್ಮ ಖಾಸಗಿ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.
  • ನಮ್ಮ ಸಹಯೋಗಿಗಳು, ಸೇವೆ ಒದಗಿಸುವವರು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ವೆಬ್‌ಸೈಟ್‌ಗಳಿಂದಲೂ ನಾವು ಖಾಸಗಿ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ನಿಮಗೆ ಆಸಕ್ತಿ ಇರುವ ಸೇವೆಯನ್ನು ಒದಗಿಸಲು ಇದನ್ನು ಬಳಸಿಕೊಳ್ಳುತ್ತೇವೆ. ಆ ಮೂಲಕ ನಮಗೆ ಡಾಟಾವನ್ನು ನಿಖರವಾಗಿ ನಿಭಾಯಿಸಲು, ಒದಗಿಸಲು ಮತ್ತು ಸೇವೆಗಳನ್ನು ವೃದ್ಧಿಸಲು ಸಾಧ್ಯವಾಗುತ್ತದೆ.
  • ಪಾವತಿ ಮಾಹಿತಿಯಲ್ಲಿ ಕ್ರೆಡಿಟ್‌/ ಡೆಬಿಟ್ ಕಾರ್ಡ್ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಖಾತೆ ವಿಧ, ಬ್ಯಾಂಕ್ ಹೆಸರುಗಳು ಇತ್ಯಾದಿಗಳಿರುತ್ತವೆ. ಅದನ್ನು ನಮ್ಮ ಅಸೋಸಿಯೇಟೆಡ್ ಪೇಯ್ಮೆಂಟ್ ಗೇಟ್‌ವೇಗಳಿಂದ ಸಂಗ್ರಹಿಸಬಹುದು. ಅಂತಹ ಡಾಟಾವನ್ನು ನಿಮ್ಮ ಹಣದ ವ್ಯವಹಾರಗಳನ್ನು ಪ್ರೊಸೆಸ್ ಮಾಡಲು ಮಾತ್ರವೇ ಬಳಸಬಹುದು.
  • ವಾಹನಗಳ ವಿವರಗಳಲ್ಲಿ ಮಾಡೆಲ್‌, ವರ್ಷ, ಬಣ್ಣ, ಆರ್‌ಟಿಒ, ನೋಂದಣಿ ಸಂಖ್ಯೆ ಮತ್ತು ಮಾರಾಟ ವಿವರಗಳು ಸೇರಿವೆ. ಅದರಲ್ಲಿ ಶುಲ್ಕ ವಿವರಗಳು, ವಾರಂಟಿ ವಿವರಗಳು, ಡೀಲರ್ ಹೆಸರು ಮತ್ತು ಖರೀದಿ ವರ್ಷವನ್ನು ಸಂಗ್ರಹಿಸಲಾಗುತ್ತದೆ.
  • ನಮ್ಮ ವೆಬ್‌ಸೈಟನ್ನು ನೀವು ಹೇಗೆ ಬಳಸಿದ್ದೀರಿ ಎನ್ನುವ ವಿವರ
  • ಕ್ಯಾಶೆಗಳು, ಸಿಸ್ಟಮ್ ಚಟುವಟಿಕೆ, ಹಾರ್ಡ್‌ವೇರ್ ಸೆಟ್ಟಿಂಗ್‌ಗಳು, ಬ್ರೌಸರ್ ಪ್ರಕಾರ, ಬ್ರೌಸರ್ ಭಾಷೆ, ನಿಮ್ಮ ಭೇಟಿಯ ದಿನಾಂಕ ಮತ್ತು ಸಮಯ, ಆ ಪುಟಗಳಲ್ಲಿ ಕಳೆದ ಸಮಯ ಮತ್ತು ಇತರ ಅಂಕಿಅಂಶಗಳು ಮತ್ತು ಉಲ್ಲೇಖಿತ ಯುಆರ್‌ಎಲ್‌ನಂತಹ ಸಾಧನದ ಈವೆಂಟ್ ಮಾಹಿತಿ.

ನಿಮ್ಮ ಸಂಬಂಧಿಕರು, ಸ್ನೇಹಿತರು ಅಥವಾ ಯಾವುದೇ ಇತರ ಮೂರನೇ ವ್ಯಕ್ತಿಗಳಿಗೆ ಸಂಬಂಧಿಸಿದ ನಿಮ್ಮ ಖಾಸಗಿ ಡೇಟಾವನ್ನು ನಮಗೆ ಒದಗಿಸುವ ಮೂಲಕ, / ಈ ಗೌಪ್ಯತೆ ನೀತಿಯಲ್ಲಿ ಇಳಿಸಲಾದ ಉದ್ದೇಶಗಳಿಗೆ ಮತ್ತು ಬಳಕೆಗಾಗಿ ಅಂತಹ ಖಾಸಗಿ ಡೇಟಾವನ್ನು ನಮಗೆ ಬಹಿರಂಗಪಡಿಸಲು ಅಂತಹ ಸಂಬಂಧಿಕರು, ಸ್ನೇಹಿತರು ಅಥವಾ ಮೂರನೇ ವ್ಯಕ್ತಿಗಳಿಂದ ನೀವು ಸೂಕ್ತ ಒಪ್ಪಿಗೆಯನ್ನು ಸ್ವೀಕರಿಸಿದ್ದೀರಿ ಎಂದು ನೀವು ಖಚಿತಪಡಿಸುತ್ತೀರಿ ಮತ್ತು ದೃಢಪಡಿಸುತ್ತೀರಿ.

ನಮ್ಮ ಗೌಪ್ಯತೆ ನೀತಿಯ ನಿಯಮಗಳು ಮತ್ತು ಷರತ್ತುಗಳಿಗೆ ನೀವು ಸಮ್ಮತಿಸಿದರೆ ಮತ್ತು ನೀವು ಒದಗಿಸಿದ ಎಲ್ಲಾ ಮಾಹಿತಿಯನ್ನು ಅದರ ಗೌಪ್ಯತೆ ನೀತಿಗೆ ಅನುಗುಣವಾಗಿ ಬಳಸಲು ಟಾಟಾ ಮೋಟಾರ್ಸ್ ಲಿಮಿಟೆಡ್‌ಗೆ ಒಪ್ಪಿಗೆ ಮತ್ತು ಅಧಿಕಾರ ನೀಡಿದರೆ ಮಾತ್ರ ಈ ವೆಬ್‌ಸೈಟ್ ಅನ್ನು ಬಳಸಬಹುದು. ನಮ್ಮ ಗೌಪ್ಯತಾ ನೀತಿಯ ನಿಯಮಗಳನ್ನು ನೀವು ಒಪ್ಪದಿದ್ದರೆ ಅಥವಾ ವೆಬ್‌ಸೈಟ್‌ಗಳು ಮತ್ತು / ಅಥವಾ ಅದರ ಯಾವುದೇ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕಾಗಿ ನಿಮಗೆ ತೃಪ್ತಿ ಇಲ್ಲದಿದ್ದರೆ, ವೆಬ್‌ಸೈಟ್ ಅನ್ನು ಇನ್ನಷ್ಟು ಬಳಸುವುದನ್ನು ನಿಷೇಧಿಸಲಾಗಿದೆ.

ಸಮುದಾಯ ಚರ್ಚೆ ಮಂಡಳಿಗಳು

ಆನ್‌ಲೈನ್ ಸಮುದಾಯ ಚರ್ಚಾ ಮಂಡಳಿಗಳು, ಬ್ಲಾಗ್‌ಗಳು ಅಥವಾ ಇತರ ಕಾರ್ಯವಿಧಾನಗಳ ಮೂಲಕ ಬಳಕೆದಾರರಿಗೆ ಪರಸ್ಪರ ಸಂವಹನ ನಡೆಸುವ ಅವಕಾಶವನ್ನು ನಮ್ಮ ವೆಬ್‌ಸೈಟ್ ನೀಡುತ್ತದೆ. ಅಂತಹ ಚರ್ಚಾ ಬೋರ್ಡ್‌ಗಳಲ್ಲಿ ಪೋಸ್ಟ್ ಮಾಡಿರುವುದನ್ನು ನಾವು ಶೋಧಿಸಿ ಬಳಸುವುದಿಲ್ಲ ಅಥವಾ ಮೇಲ್ವಿಚಾರಣೆ ಮಾಡುವುದಿಲ್ಲ. ಈ ಚರ್ಚಾ ಬೋರ್ಡ್‌ಗಳಲ್ಲಿ ಪೋಸ್ಟ್ ಮಾಡಲು ನೀವು ಆಯ್ಕೆ ಮಾಡಿದರೆ, ಯಾವುದೇ ಖಾಸಗಿ ವಿವರಗಳನ್ನು ಬಹಿರಂಗಪಡಿಸುವ ಮೊದಲು ಜಾಗರೂಕತೆ ವಹಿಸಬೇಕು. ಏಕೆಂದರೆ ಅಂತಹ ಮಾಹಿತಿಯನ್ನು ನಮ್ಮ ಗೌಪ್ಯತೆ ನೀತಿಯಿಂದ ರಕ್ಷಿಸಲಾಗುವುದಿಲ್ಲ ಅಥವಾ ಅಂತಹ ಪೋಸ್ಟಿಂಗ್‌ನಲ್ಲಿ ನಿಮ್ಮ ಖಾಸಗಿ ವಿವರಗಳನ್ನು ಬಹಿರಂಗಪಡಿಸಲು ಆಯ್ಕೆ ಮಾಡಿದರೆ ನಾವು ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ, ನೀವು ನಮ್ಮ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುವ ಖಾಸಗಿ ವಿವರಗಳು ಇಂಟರ್ನೆಟ್ ಮೂಲಕ ಪ್ರಪಂಚದಾದ್ಯಂತ ಲಭ್ಯವಿರಬಹುದು. ಇತರರಿಂದ ಅಂತಹ ಮಾಹಿತಿಯ ಬಳಕೆ ಅಥವಾ ದುರುಪಯೋಗವನ್ನು ನಾವು ತಡೆಯಲು ಸಾಧ್ಯವಿಲ್ಲ.

TML ವೆಬ್‌ಸೈಟ್‌ಗಳು ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರಬಹುದು. ಅಂತಹ ವೆಬ್‌ಸೈಟ್‌ಗಳ ಗೌಪ್ಯತೆ ಅಥವಾ ವಿಷಯಕ್ಕೆ TML ಜವಾಬ್ದಾರನಾಗಿರುವುದಿಲ್ಲ:

  • ನಮ್ಮ ವೆಬ್‌ಸೈಟ್‌ನಿಂದ ಲಿಂಕ್‌ಗಳನ್ನು ಬಳಸಿಕೊಂಡು ನೀವು ತೃತೀಯ ಪಕ್ಷದ ವೆಬ್‌ಸೈಟ್ ಅನ್ನು ಪ್ರವೇಶಿಸಿದ್ದೀರಿ; ಅಥವಾ
  • ನೀವು ತೃತೀಯ ಪಕ್ಷದ ವೆಬ್‌ಸೈಟ್‌ನಿಂದ ನಮ್ಮ ವೆಬ್‌ಸೈಟ್‌ಗೆ ಲಿಂಕ್ ಮಾಡಿದ್ದೀರಿ.

ಖಾಸಗಿ ಮಾಹಿತಿಯನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ

ನಾವು ಖಾಸಗಿ ವಿವರಗಳನ್ನು ಬಳಸಿಕೊಳ್ಳಲು ನಮಗೆ ಸೂಕ್ತ ಕಾರಣಗಳು ಇದ್ದರೆ ಮಾತ್ರ ಬಳಸಿಕೊಳ್ಳುತ್ತೇವೆ. ನಾವು ನಿಮ್ಮ ಡೇಟಾವನ್ನು ಈ ಒಂದು ಅಥವಾ ಹೆಚ್ಚಿನ ಕಾರಣಗಳಿಗಾಗಿ ಮಾತ್ರ ಬಳಸುತ್ತೇವೆ:

  • ನಾವು ನಿಮ್ಮೊಂದಿಗೆ ಹೊಂದಿರುವ ಒಪ್ಪಂದವನ್ನು ಪೂರೈಸಲು, ಅಥವಾ
  • ನಿರ್ದಿಷ್ಟ ಕಾರಣಕ್ಕಾಗಿ ನಿಮ್ಮ ಡೇಟಾವನ್ನು ಬಳಸಲು ನಾವು ಕಾನೂನು ಕರ್ತವ್ಯವನ್ನು ಹೊಂದಿದ್ದರೆ, ಅಥವಾ
  • ನಾವು ಅದನ್ನು ಬಳಸಲು ನಿಮ್ಮ ಒಪ್ಪಿಗೆಯನ್ನು ಪಡೆದಾಗ, ಅಥವಾ
  • ನಮ್ಮ ಉದ್ಯಮ ಅಥವಾ ವಾಣಿಜ್ಯೋದ್ದೇಶಗಳಿಗೆ ನಮ್ಮ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಕಂಡುಬಂದಲ್ಲಿ ನಿಮ್ಮ ಡಾಟಾವನ್ನು ಬಳಸಲು ಕಾರಣಗಳಿರುತ್ತವೆ. ಆದರೆ ಅಂತಹ ಸಮಯದಲ್ಲಿ, ನಮ್ಮ ಸೂಕ್ತ ಹಿತಾಸಕ್ತಿಯನ್ನು ಪಕ್ಕಕ್ಕಿಟ್ಟು ನಿಮಗೆ ಏನು ಉತ್ತಮ ಎಂದು ಗಮನಿಸುತ್ತೇವೆ.

ನಿಮ್ಮ ಮಾಹಿತಿಯನ್ನು ಬಳಕೆ ಮಾಡುವಾಗ ನಮ್ಮಲ್ಲಿ ಚಾಲ್ತಿಯಲ್ಲಿರುವ ಗೌಪ್ಯತೆಯ ಸೂಚನೆ ಅನ್ವಯಿಸುತ್ತದೆ. TML ನಮ್ಮ ಸಾಮಾನ್ಯ ವ್ಯಾಪಾರ ಬಳಕೆಗಾಗಿ ನಮಗೆ ಒದಗಿಸಿದ ಮಾಹಿತಿಯನ್ನು ಬಳಸುತ್ತದೆ. ಅದರಲ್ಲಿ ಈ ಕೆಳಗಿನ ಉದ್ದೇಶಗಳನ್ನು ಇರಬಹುದು:

  • ನಿಮ್ಮ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ;
  • . ಗ್ರಾಹಕ ಸೇವೆಗಳ ವಿಚಾರಗಳನ್ನು ಒಳಗೊಂಡಂತೆ ನಿಮಗೆ ಸೇವೆಗಳನ್ನು ಒದಗಿಸಲು;
  • ನಮ್ಮ ಅಥವಾ ನಮ್ಮ ಅಂಗಸಂಸ್ಥೆಗಳ ಈಗ ನೀಡಲಾಗುತ್ತಿರುವ ಸೇವೆಗಳು, ನಾವು ಅಭಿವೃದ್ಧಿಗೊಳಿಸುತ್ತಿರುವ ಹೊಸ ಸೇವೆಗಳು ಅಥವಾ ಪ್ರಚಾರಗಳು ಮತ್ತು ನಿಮಗೆ ಲಭ್ಯವಿರುವ ಅವಕಾಶಗಳ ಕುರಿತು ನಿಮಗೆ ಮಾಹಿತಿ ಕಳುಹಿಸಲು;
  • ನಮ್ಮ ಸೇವೆಗಳಿಗೆ ಸಂಬಂಧಿಸಿದಂತೆ ಹೊಸ ವೈಶಿಷ್ಟ್ಯಗಳು ಅಥವಾ ಉನ್ನತೀಕರಿಸಿದ ವಿವರಗಳ ಕುರಿತು ನಿಮಗೆ ಅಲರ್ಟ್ ಕೊಡಲು
  • ನೀವು ತಿಳಿದುಕೊಳ್ಳಲು ಬಯಸುವ ಉದ್ಯೋಗ ಅಥವಾ ವೃತ್ತಿ ಅವಕಾಶಗಳ ಬಗ್ಗೆ ನಿಮ್ಮೊಂದಿಗೆ ಸಂವಹನ ನಡೆಸಲು;
  • ನಿಮಗಾಗಿ ನಮ್ಮ ಸೈಟ್ ಮತ್ತು ನಮ್ಮ ಸೇವೆಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಖಚಿತಪಡಿಸಿಕೊಳ್ಳಲು;
  • ಜಾಹೀರಾತು ಮತ್ತು ಅದರ ವ್ಯಾಪ್ತಿ ಎಷ್ಟು ಪರಿಣಾಮಕಾರಿಯಾಗಿದೆ ಎಂದು ಅಳೆಯಲು ಅಥವಾ ಅರ್ಥಮಾಡಿಕೊಳ್ಳಲು.
  • ನಮ್ಮ ವೆಬ್‌ಸೈಟ್‌ಗಳು, ನಿಯಮಗಳು ಮತ್ತು ಷರತ್ತುಗಳಲ್ಲಿ ಮಾಡಲಾದ ಬದಲಾವಣೆಗಳು, ಬಳಕೆದಾರ ಒಪ್ಪಂದಗಳು ಮತ್ತು ನೀತಿಗಳು ಮತ್ತು/ಅಥವಾ ಇತರ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ನಿಮಗೆ ಕಳುಹಿಸಲು.
  • ಮಾರ್ಕೆಟಿಂಗ್ ಮತ್ತು ಕಾರ್ಯಕ್ರಮಗಳು: ಇಮೇಲ್, ದೂರವಾಣಿ, ಪಠ್ಯ ಸಂದೇಶ ಕಳುಹಿಸುವಿಕೆ, ನೇರವಾಗಿ ಪತ್ರ ಮತ್ತು ಆನ್‌ಲೈನ್‌ನಂತಹ ವಿವಿಧ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರ್ಕೆಟಿಂಗ್ ಮತ್ತು ಕಾರ್ಯಕ್ರಮದ ವಿವರಗಳನ್ನು ನಿಮಗೆ ತಲುಪಿಸಲು ನಿಮ್ಮ ಖಾಸಗಿ ಮಾಹಿತಿಯನ್ನು ನಾವು ಬಳಸುತ್ತೇವೆ. ನಮ್ಮಿಂದ ನಿಮಗೆ ಕಳುಹಿಸುವ ಮಾರ್ಕೆಟಿಂಗ್ ಇಮೇಲ್ಗಳಲ್ಲಿ, ಭವಿಷ್ಯದಲ್ಲಿ ಅಂತಹ ಇಮೇಲ್‌ ಸ್ವೀಕರಿಸದೆ ಇರಲು ಏನು ಮಾಡಬೇಕು ಎಂಬ ವಿವರವನ್ನೂ ನೀಡುತ್ತೇವೆ. ನಿಮ್ಮ ಮಾಹಿತಿ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಆದ್ಯತೆಗಳನ್ನು ಅರ್ಥ ಮಾಡಿಕೊಂಡು ನಿಭಾಯಿಸಲು ಆದ್ಯತೆಯ ಇಮೇಲ್ ಕೇಂದ್ರವೂ ನಮ್ಮಲ್ಲಿದೆ. ನೀವು ಮಾರ್ಕೆಟಿಂಗ್ ಇಮೇಲ್‌ಗಳನ್ನು ಸ್ವೀಕರಿಸಲು ಬಯಸದೆ ಇದ್ದರೂ, ನಿಮ್ಮ ಖಾತೆಗಳು ಮತ್ತು ಚಂದಾದಾರಿಕೆಗೆ ಸಂಬಂಧಿಸಿದ ಕೆಲವು ಪ್ರಮುಖ ಸೇವಾ ಮಾಹಿತಿಯನ್ನು ನಾವು ನಿಮಗೆ ಕಳುಹಿಸಬಹುದು ಎಂಬುದನ್ನು ದಯವಿಟ್ಟು ನೆನಪಿಡಿ.
  • ನಿಯಮ ಉಲ್ಲಂಘನೆಗಳಾದಲ್ಲಿ ತನಿಖೆ ಮಾಡಲು ಅಥವಾ ವೆಬ್‌ಸೈಟ್‌ಗೆ ಸಂಬಂಧಿಸಿದ ವಿವರ ಅಥವಾ ಸುರಕ್ಷತೆ ಮತ್ತು ನಮ್ಮ ವೆಬ್‌ಸೈಟ್‌ನ ಬಳಕೆದಾರರ ಹಕ್ಕುಗಳನ್ನು ರಕ್ಷಿಸಲು.
  • ಕಾನೂನು ಬಾಧ್ಯತೆಗಳು: ಅಪರಾಧದ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ ಅಥವಾ ತನಿಖೆಯಂತಹ ಕಾನೂನು ಮತ್ತು ಅನುಸರಣೆಗೆ, ನಷ್ಟ ತಡೆಗಟ್ಟಲು ಅಥವಾ ವಂಚನೆ ತಡೆಯುವುದು ಮೊದಲಾದ ಉದ್ದೇಶದಿಂದ ನಾವು ಖಾಸಗಿ ಮಾಹಿತಿಯನ್ನು ಬಳಸುವುದು ಮತ್ತು ಉಳಿಸಿಕೊಳ್ಳುವ ಅಗತ್ಯ ಬರಬಹುದು. ನಮ್ಮ ಆಂತರಿಕ ಮತ್ತು ಬಾಹ್ಯ ಆಡಿಟ್ ಅಗತ್ಯತೆಗಳು, ಮಾಹಿತಿ ಭದ್ರತಾ ಉದ್ದೇಶಗಳಿಗೆ ಅಗತ್ಯ ಅಥವಾ ಸೂಕ್ತವಾಗಿದೆ ಎಂದು ನಮಗೆ ಅನಿಸಿದಲ್ಲಿ ನಾವು ಖಾಸಗಿ ಮಾಹಿತಿಯನ್ನು ಸಹ ಬಳಸಬಹುದು:
  • ಅನ್ವಯವಾಗುವ ಕಾನೂನಿನ ಅಡಿಯಲ್ಲಿ, ನಿಮ್ಮ ವಾಸವಿರುವ ದೇಶದ ಹೊರಗಿನ ಕಾನೂನುಗಳನ್ನೂ ಅನುಸರಣೆ ಮಾಡಬಹುದು;
  • ವಿನಂತಿಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎನ್ನುವ ವಿಚಾರದಲ್ಲಿ ನ್ಯಾಯಾಲಯಗಳು, ಕಾನೂನು ಜಾರಿ ಸಂಸ್ಥೆಗಳು, ನಿಯಂತ್ರಕ ಏಜೆನ್ಸಿಗಳು ಮತ್ತು ಇತರ ಸಾರ್ವಜನಿಕ ಮತ್ತು ಸರ್ಕಾರಿ ಅಧಿಕಾರಿಗಳೆಂದರೆ, ನಿಮ್ಮ ವಾಸಸ್ಥಳದ ಹೊರಗಿನ ಅಥವಾ ಹೊರ ದೇಶಗಳ ಅಂತಹ ಅಧಿಕಾರಿಗಳೂ ಸೇರಿರುತ್ತಾರೆ;

ನಿಮಗಾಗಿ ಸೇವೆಗಳನ್ನು ನಿರ್ವಹಿಸಲು ಅಥವಾ ನಿಮ್ಮ ವಿಚಾರಣೆಗಳಿಗೆ ಪ್ರತಿಕ್ರಿಯಿಸಲು ಸಮಂಜಸವಾಗಿ ಅಗತ್ಯವಿರುವ ಅಂತಹ ಮಾಹಿತಿಯನ್ನು ಮಾತ್ರ ಸಂಗ್ರಹಿಸಲು ನಾವು ಪ್ರಯತ್ನಿಸುತ್ತೇವೆ. ನೀವು ಒದಗಿಸುವ ಮಾಹಿತಿಯು ನಿಖರ, ಸಂಪೂರ್ಣ ಮತ್ತು ಪ್ರಸ್ತುತವಾಗಿದೆ ಎಂದು ಖಚಿತಪಡಿಸುವುದು ನಿಮ್ಮದೇ ಜವಾಬ್ದಾರಿಯಾಗಿರುತ್ತದೆ.

ಟಿಎಂಎಲ್ ಸಂಪೂರ್ಣ ಅಥವಾ ಟಿಎಂಎಲ್‌ ವೆಬ್‌ಸೈಟ್‌ನ ಯಾವುದೇ ಭಾಗಕ್ಕೆ ಮತ್ತು ಸಂಬಂಧಿತ ಸೇವೆಗಳಿಗೆ ಅಥವಾ ಅದರ ಯಾವುದೇ ಭಾಗಕ್ಕೆ ಯಾವುದೇ ಸೂಚನೆಯಿಲ್ಲದೆ ಯಾವುದೇ ಸಮಯದಲ್ಲಿ ನಿಮ್ಮ ಪ್ರವೇಶ ಮುಕ್ತಾಯಗೊಳಿಸುವ ಹಕ್ಕನ್ನು ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿದೆ.

ಟಿಎಂಎಲ್ ಸಂಪೂರ್ಣ ಅಥವಾ ಟಿಎಂಎಲ್‌ ವೆಬ್‌ಸೈಟ್‌ನ ಯಾವುದೇ ಭಾಗಕ್ಕೆ ಮತ್ತು ಸಂಬಂಧಿತ ಸೇವೆಗಳಿಗೆ ಅಥವಾ ಅದರ ಯಾವುದೇ ಭಾಗಕ್ಕೆ ಯಾವುದೇ ಸೂಚನೆಯಿಲ್ಲದೆ ಯಾವುದೇ ಸಮಯದಲ್ಲಿ ನಿಮ್ಮ ಪ್ರವೇಶ ಮುಕ್ತಾಯಗೊಳಿಸುವ ಹಕ್ಕನ್ನು ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿದೆ.

ನಾವು ನಿಮ್ಮ ಖಾಸಗಿ ಮಾಹಿತಿ ಹಂಚಿಕೊಳ್ಳುವಾಗ

ಸೇವೆಗಳನ್ನು ಒದಗಿಸಲು ಅಥವಾ ನಮ್ಮ ವ್ಯಾಪಾರ ಕಾರ್ಯಾಚರಣೆಗಳನ್ನು ನಡೆಸಲು ಅಗತ್ಯವಾದಾಗ ಟಿಎಂಎಲ್ ಖಾಸಗಿ ಡೇಟಾವನ್ನು ಹಂಚಿಕೊಳ್ಳುತ್ತದೆ ಅಥವಾ ಬಹಿರಂಗಪಡಿಸುತ್ತದೆ. ಟಿಎಂಎಲ್ ನಿಮ್ಮ ಖಾಸಗಿ ಡೇಟಾವನ್ನು ಹೊರಗೆ ವರ್ಗಾಯಿಸಲು ಬಯಸಿದರೆ, ಟಿಎಂಎಲ್ ನಿಮ್ಮ ಗೌಪ್ಯತೆ ಹಕ್ಕುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಸಾಕಷ್ಟು ಸುರಕ್ಷತೆಯನ್ನು ವಹಿಸಿದೆ ಎನ್ನುವುದನ್ನು ಖಾತರಿಪಡಿಸುತ್ತದೆ. ನಾವು ನಿಮ್ಮ ಬಗ್ಗೆ ಯಾವುದೇ ವಿಶೇಷ ವಿಭಾಗದಲ್ಲಿ ಖಾಸಗಿ ಡೇಟಾ (ನಿಮ್ಮ ಜನಾಂಗ ಅಥವಾ ಜನಾಂಗೀಯತೆ, ಧಾರ್ಮಿಕ ಅಥವಾ ನೈತಿಕ ನಂಬಿಕೆಗಳು, ಲೈಂಗಿಕ ಜೀವನ, ಲೈಂಗಿಕ ದೃಷ್ಟಿಕೋನ, ರಾಜಕೀಯ ಅಭಿಪ್ರಾಯಗಳು, ಟ್ರೇಡ್ ಯೂನಿಯನ್ ಸದಸ್ಯತ್ವ, ನಿಮ್ಮ ಆರೋಗ್ಯ ಮತ್ತು ಆನುವಂಶಿಕ ಮತ್ತು ಬಯೋಮೆಟ್ರಿಕ್ ಡೇಟಾದ ಬಗ್ಗೆ ವಿವರ ಸೇರಿದಂತೆ) ಸಂಗ್ರಹಿಸುವುದಿಲ್ಲ. ಕ್ರಿಮಿನಲ್ ಅಪರಾಧಗಳು ಮತ್ತು ನಿಮ್ಮ ಮೇಲೆ ಆರೋಪಗಳಿದ್ದರೆ, ಆ ಬಗ್ಗೆಯೂ ವಿವರ ಸಂಗ್ರಹಿಸುವುದಿಲ್ಲ.

ಈ ಸೈಟ್‌ನಲ್ಲಿ ಜಾಹೀರಾತು ಮಾಡಲಾದ ಸಿಬ್ಬಂದಿ ಅವಕಾಶಗಳಿಗಾಗಿ ಅಥವಾ ನಮ್ಮ ಅಂಗಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಜಾಹೀರಾತು ಮಾಡಲಾದ ಅವಕಾಶಗಳಿಗೆ ಸಂಬಂಧಿಸಿದಂತೆ ಟಿಎಂಎಲ್ ನಿಮ್ಮ ಸಮ್ಮತಿಯೊಂದಿಗೆ ತನಗೆ ಸಂಬಂಧವಿಲ್ಲದ ತೃತೀಯ ಪಕ್ಷದ ಗ್ರಾಹಕರಿಗೆ ನಿಮ್ಮ ಬಗ್ಗೆ ಮಾಹಿತಿಯನ್ನು ಟಿಎಂಎಲ್ ಬಹಿರಂಗಪಡಿಸಬಹುದು. ಉದಾಹರಣೆಗೆ-

ಟಿಎಂಎಲ್ ಒಳಗೆ: ಪ್ರಪಂಚದಾದ್ಯಂತದ ನಮ್ಮ ವ್ಯವಹಾರಗಳು ವಿವಿಧ ಟಿಎಂಎಲ್ ತಂಡಗಳು ಮತ್ತು ಕಾರ್ಯಗಳಿಂದ ಬೆಂಬಲಿತವಾಗಿದೆ ಮತ್ತು ಸೇವೆಗಳು, ಖಾತೆ ಆಡಳಿತ, ಮಾರಾಟ ಮತ್ತು ಮಾರ್ಕೆಟಿಂಗ್, ಗ್ರಾಹಕ ಮತ್ತು ತಾಂತ್ರಿಕ ಬೆಂಬಲಕ್ಕಾಗಿ ಅಗತ್ಯವಿದ್ದಲ್ಲಿ ಖಾಸಗಿ ಮಾಹಿತಿ ಅವರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ, ಮತ್ತು ವ್ಯಾಪಾರ ಮತ್ತು ಉತ್ಪನ್ನ ಅಭಿವೃದ್ಧಿ. ನಮ್ಮ ಎಲ್ಲಾ ಉದ್ಯೋಗಿಗಳು ಮತ್ತು ಗುತ್ತಿಗೆದಾರರು ಖಾಸಗಿ ಡೇಟಾ ನಿರ್ವಹಿಸುವಾಗ ನಮ್ಮ ಡೇಟಾ ರಕ್ಷಣೆ ಮತ್ತು ಭದ್ರತಾ ನೀತಿಗಳನ್ನು ಅನುಸರಿಸುವ ಅಗತ್ಯವಿದೆ.

ಅಂಗಸಂಸ್ಥೆಗಳು: ನಮ್ಮ ಮೂಲ ಕಂಪನಿ, ಅಂಗಸಂಸ್ಥೆಗಳು, ಜಂಟಿ ಉದ್ಯಮಗಳು, ಗುಂಪು ಮತ್ತು ಸಹವರ್ತಿ ಕಂಪನಿಗಳು. ಈ ಘಟಕಗಳು ಈ ಮಾಹಿತಿಯನ್ನು ಮೇಲೆ ವಿವರಿಸಿದ ಉದ್ದೇಶಗಳಿಗಾಗಿ ಬಳಸಬಹುದು.

ಡೀಲರ್‌ಗಳು: ನಮ್ಮ ಅಧಿಕೃತ ಡೀಲರ್‌ಗಳು ಸ್ವತಂತ್ರ ಒಡೆತನ ಹೊಂದಿದ್ದಾರೆ ಮತ್ತು ಕಾರ್ಯನಿರ್ವಹಿಸುತ್ತಾರೆ. ಅವರು ಈ ಮಾಹಿತಿಯನ್ನು ಮಾರ್ಕೆಟಿಂಗ್, ಗ್ರಾಹಕ ಸೇವೆ, ಪೂರೈಕೆ ಮತ್ತು ಸಂಬಂಧಿತ ಉದ್ದೇಶಗಳು ಸೇರಿದಂತೆ ತಮ್ಮ ದೈನಂದಿನ ವ್ಯವಹಾರ ಉದ್ದೇಶಗಳಿಗಾಗಿ ಬಳಸಬಹುದು.

ವಿತರಕರು: ನಮ್ಮ ಅಧಿಕೃತ ವಿತರಕರು ಸ್ವತಂತ್ರ ಒಡೆತನ ಹೊಂದಿದ್ದಾರೆ ಮತ್ತು ಕಾರ್ಯನಿರ್ವಹಿಸುತ್ತಾರೆ. ಅವರು ಈ ಮಾಹಿತಿಯನ್ನು ಮಾರ್ಕೆಟಿಂಗ್, ಗ್ರಾಹಕ ಸೇವೆ, ಪೂರೈಕೆ ಮತ್ತು ಸಂಬಂಧಿತ ಉದ್ದೇಶಗಳು ಸೇರಿದಂತೆ ತಮ್ಮ ದೈನಂದಿನ ವ್ಯವಹಾರ ಉದ್ದೇಶಗಳಿಗಾಗಿ ಬಳಸಬಹುದು.

ನಮ್ಮ ಉದ್ಯಮ ಭಾಗೀದಾರರು: ಸಹ-ಬ್ರಾಂಡ್ ಸೇವೆಗಳನ್ನು ನೀಡಲು, ವಿಷಯವನ್ನು ಒದಗಿಸಲು ಅಥವಾ ಕಾರ್ಯಕ್ರಮಗಳು, ಸಮ್ಮೇಳನಗಳು ಮತ್ತು ವಿಚಾರಸಂಕಿರಣಗಳನ್ನು ಆಯೋಜಿಸಲು ನಾವು ಕೆಲವೊಮ್ಮೆ ಇತರ ಸಂಸ್ಥೆಗಳೊಂದಿಗೆ ಸಹಯೋಗ ಮಾಡಿಕೊಳ್ಳುತ್ತೇವೆ. ಈ ವ್ಯವಸ್ಥೆಗಳ ಭಾಗವಾಗಿ, ನೀವು ಟಿಎಂಎಲ್‌ ಮತ್ತು ನಮ್ಮ ಪಾಲುದಾರರು ಮತ್ತು ನಮ್ಮ ಪಾಲುದಾರರ ಗ್ರಾಹಕರಾಗಿರಬಹುದು. ನಾವು ನಿಮ್ಮ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಹಂಚಿಕೊಳ್ಳಬಹುದು. ಟಿಎಂಎಲ್‌ ಗೌಪ್ಯತೆ ಸೂಚನೆಗೆ ಅನುಗುಣವಾಗಿ ಖಾಸಗಿ ಡೇಟಾವನ್ನು ನಿರ್ವಹಿಸುತ್ತದೆ.

ನಮ್ಮ ತೃತೀಯ ಪಕ್ಷದ ಸೇವೆ ಒದಗಿಸುವವರು: ಅಗತ್ಯವಿರುವ ಯಾವುದೇ ಬೆಂಬಲಕ್ಕಾಗಿ ನಾವು ಪ್ರಪಂಚದಾದ್ಯಂತದ ಸೇವಾ ಪೂರೈಕೆದಾರರೊಂದಿಗೆ ಸಹಕರಿಸುತ್ತೇವೆ. ಸಾಫ್ಟ್‌ವೇರ್, ಸಿಸ್ಟಮ್ ಮತ್ತು ಪ್ಲಾಟ್‌ಫಾರ್ಮ್ ಬೆಂಬಲದಂತಹ ಅವರು ನಮಗೆ ಒದಗಿಸುವ ಸೇವೆಗಳನ್ನು ಪೂರೈಸಲು ಅಗತ್ಯವಿದ್ದಾಗ ಮಾತ್ರ ಇವರಿಗೆ ನಾವು ಖಾಸಗಿ ಡೇಟಾ ಬಳಸಲು ಅವಕಾಶ ನೀಡಬಹುದು; ನೇರ ಮಾರುಕಟ್ಟೆ ಸೇವೆಗಳು; ಕ್ಲೌಡ್ ಹೋಸ್ಟಿಂಗ್ ಸೇವೆಗಳು; ಜಾಹೀರಾತು; ಮತ್ತು ಆರ್ಡರ್ ಪೂರೈಸುವಿಕೆ ಮತ್ತು ವಿತರಣೆ. ನಮ್ಮ ತೃತೀಯ ವ್ಯಕ್ತಿಯ ಸೇವಾ ಪೂರೈಕೆದಾರರು ನಮಗೆ ಸೇವೆಗಳನ್ನು ಒದಗಿಸುವುದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ನಾವು ಅವರಿಗೆ ಲಭ್ಯವಾಗುವಂತೆ ಮಾಡುವ ಖಾಸಗಿ ಡೇಟಾವನ್ನು ಹಂಚಿಕೊಳ್ಳಲು ಅಥವಾ ಬಳಸಲು ಅನುಮತಿಸುವುದಿಲ್ಲ. ಇದಲ್ಲದೆ, ನಿಮ್ಮ ಖಾಸಗಿ ವಿವರಗಳ ಪ್ರಕ್ರಿಯೆಗೆ ನಾವು ಸೇವೆ ಒದಗಿಸುವ ತೃತೀಯ ಪಕ್ಷದವರಿಗೆ ವಹಿಸಿದರೆ, ಸೂಕ್ತವಾದ ತಾಂತ್ರಿಕ ಮತ್ತು ಭೌತಿಕ ಸುರಕ್ಷತೆಗಳನ್ನು ನಿರ್ವಹಿಸುವ ಮತ್ತು ಅಂತಹ ತೃತೀಯ ಪಕ್ಷದ ಸೇವೆಯನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ತೃತೀಯ ಪಕ್ಷದ ಸೇವಾ ಸಂಸ್ಥೆಯನ್ನು ನಾವು ಆರಿಸುತ್ತೇವೆ. ಪೂರೈಕೆದಾರರು. ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ನಾವು ನಿಮ್ಮ ಖಾಸಗಿ ವಿವರಗಳನ್ನು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ. ಆದರೂ, ಡೇಟಾ ಒಟ್ಟುಗೂಡಿಸುವ ಉದ್ದೇಶಗಳಿಗಾಗಿ ನಾವು ನಿಮ್ಮ ಖಾಸಗಿ ಡೇಟಾ ಬಳಸಬಹುದು. ಅದನ್ನು ನಮ್ಮ ವಿವೇಚನೆಯಿಂದ ಇತರ ಪಕ್ಷಗಳಿಗೆ ಮಾರಬಹುದು. ಅಂತಹ ಯಾವುದೇ ಡೇಟಾ ಸಂಗ್ರಹದಲ್ಲಿ ನಿಮ್ಮ ಯಾವುದೇ ಖಾಸಗಿ ವಿವರಗಳಿರುವುದಿಲ್ಲ. ‘ವಿಶೇಷ ಕಾಳಜಿ-ಅಗತ್ಯವಿರುವ ಖಾಸಗಿ ಮಾಹಿತಿ’ ಹೊರತುಪಡಿಸಿ, ನಿಮ್ಮ ಮೊದಲ ಹೆಸರು, ಕೊನೆಯ ಹೆಸರು, ಇಮೇಲ್ ವಿಳಾಸ, ಫೋನ್ ಸಂಖ್ಯೆ, ರಸ್ತೆ ವಿಳಾಸ, ನಗರ, ರಾಜ್ಯ, ಪ್ರಾಂತ್ಯದ ಪ್ರದೇಶ, ಐಪಿ ವಿಳಾಸ, ಕುಕೀಗಳಂತಹ ಡೇಟಾ ಸಂಗ್ರಹಿಸುವ ಉದ್ದೇಶದಿಂದ ಪಡೆದ ಖಾಸಗಿ ವಿವರಗಳನ್ನು ನಾವು ಇಂಟರ್‌ನೆಟ್ ಅಥವಾ ಇಮೇಲ್ ಮೂಲಕ ನಿಮ್ಮ ಒಪ್ಪಿಗೆ ಇಲ್ಲದೆ ಒದಗಿಸಬಹುದು. ಮತ್ತು ಆ ತೃತೀಯ ಪಕ್ಷದವರೆಂದರೆ ಇವರು ಇರಬಹುದು, ಆದರೆ ಇವರು ಮಾತ್ರವಾಗಿರುವುದಿಲ್ಲ: ಪಾವತಿ ಸೇವೆ ಒದಗಿಸುವವರು, ಎಲ್ಲಾ ಕೇಂದ್ರಗಳು, ಡೇಟಾ ನಿರ್ವಹಣೆ ಸೇವೆಗಳು, ಸಹಾಯ ಡೆಸ್ಕ್‌ನಲ್ಲಿ ಕೆಲಸ ಮಾಡುವವರು, ಅಕೌಂಟೆಂಟ್‌ಗಳು, ಕಾನೂನು ಸಂಸ್ಥೆಗಳು, ಲೆಕ್ಕಪರಿಶೋಧಕರು, ಶಾಪಿಂಗ್ ಕಾರ್ಟ್ ಮತ್ತು ಇಮೇಲ್ ಸೇವೆ ಒದಗಿಸುವವರು ಮತ್ತು ಶಿಪ್ಪಿಂಗ್ ಕಂಪನಿಗಳು. ಅಂತಹ ತೃತೀಯ ಪಕ್ಷದ ಸೇವಾ ಪೂರೈಕೆದಾರರಿಗೆ ನಿಮ್ಮ ಖಾಸಗಿ ಡೇಟಾವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ನಾವು ಸೂಕ್ತವಾದ ತಾಂತ್ರಿಕ ಮತ್ತು ಭೌತಿಕ ಸುರಕ್ಷತೆ ವಹಿಸುತ್ತೇವೆ. ಅಂತಹ ತೃತೀಯ ಪಕ್ಷದ ಸೇವಾ ಒದಗಿಸುವವರಿಗೆ ನಿಮ್ಮ ಖಾಸಗಿ ಡೇಟಾವನ್ನು ಒದಗಿಸುವುದನ್ನು ನಿಲ್ಲಿಸುವಂತೆ ನಮ್ಮನ್ನು ವಿನಂತಿಸಬೇಕೆಂದಿದ್ದರೆ, ಅಂತಹ ತೃತೀಯ ಪಕ್ಷದ ಸೇವಾ ಪೂರೈಕೆದಾರರಿಗೆ ನಿಮ್ಮ ಖಾಸಗಿ ಡೇಟಾವನ್ನು ಒದಗಿಸುವುದನ್ನು ನಾವು ನಿಲ್ಲಿಸುತ್ತೇವೆ. ನೀವು ಅಂತಹ ಸುರಕ್ಷತೆಗಳ ನಕಲು ಪ್ರತಿ ಪಡೆಯಲು ಬಯಸಿದರೆ ಅಥವಾ ತೃತೀಯ ಪಕ್ಷದ ಸೇವೆ ಒದಗಿಸುವ ಸಂಸ್ಥೆಗಳಿಗೆ ನಿಮ್ಮ ಖಾಸಗಿ ವಿವರಗಳನ್ನು ಒದಗಿಸುವುದನ್ನು ನಿಲ್ಲಿಸಲು ಬಯಸಿದರೆ, ನಿಮ್ಮ ವಿನಂತಿಯೊಂದಿಗೆ dpr@tatamotors.com ಗೆ ಇಮೇಲ್ ಕಳುಹಿಸಿ. ನಾವು ಯಾವುದೇ ತೃತೀಯ ಪಕ್ಷದ ಸೇವಾ ಸಂಸ್ಥೆಗಳಿಗೆ ನಿಮ್ಮ ಖಾಸಗಿ ವಿವರಗಳನ್ನು ಒದಗಿಸಿದಾಗ ಅಥವಾ ತೃತೀಯ ಪಕ್ಷದಿಂದ ಖಾಸಗಿ ವಿವರಗಳನ್ನು ಸ್ವೀಕರಿಸಿದಾಗ, ನಾವು ಅಂತಹ ನಿಬಂಧನೆ ಅಥವಾ ರಶೀದಿಯ ದಾಖಲೆ ಇಟ್ಟುಕೊಳ್ಳುತ್ತೇವೆ. ಇದಲ್ಲದೆ, ನಾವು ಯಾವುದೇ ತೃತೀಯ ಪಕ್ಷದಿಂದ ಖಾಸಗಿ ವಿವರಗಳನ್ನು ಸ್ವೀಕರಿಸಿದಾಗ, ಯಾವ ಸಂದರ್ಭದಲ್ಲಿ ವಿವರಗಳು ನಮಗೆ ಬಂದಿವೆ ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ.

ಕಾನೂನು ಕಾರಣಗಳಿಗೆ ತೃತೀಯ ಪಕ್ಷಗಳು: ನಾವು ಖಾಸಗಿ ಡೇಟಾವನ್ನು ಅಗತ್ಯವಿದೆ ಎಂದು ಕಂಡುಬಂದಾಗ ಹಂಚಿಕೊಳ್ಳುತ್ತೇವೆ, ಉದಾಹರಣೆಗೆ:

  • ಕಾನೂನು ಬಾಧ್ಯತೆಗಳನ್ನು ಅನುಸರಿಸಲು ಮತ್ತು ಕಾನೂನು ಜಾರಿ ಮತ್ತು ಇತರ ಸಾರ್ವಜನಿಕ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಏಜೆನ್ಸಿಗಳಿಂದ ವಿನಂತಿಗಳಿಗೆ ಪ್ರತಿಕ್ರಿಯಿಸಲು, ನಿಮ್ಮ ವಾಸಸ್ಥಳದ ಹೊರಗೆ ಅಥವಾ ದೇಶದ ಹೊರಗಿರುವ ಅಧಿಕಾರಿಗಳಿಗೂ ಇದು ಅನ್ವಯಿಸುತ್ತದೆ.
  • ವಿಲೀನ, ಮಾರಾಟ, ಪುನರ್‌ರಚನೆ, ಸ್ವಾಧೀನ, ಜಂಟಿ ಉದ್ಯಮ, ನಿಯೋಜನೆ, ವರ್ಗಾವಣೆ ಅಥವಾ ನಮ್ಮ ವ್ಯವಹಾರ, ಸ್ವತ್ತುಗಳು ಅಥವಾ ಸರಕುಗಳ ಎಲ್ಲಾ ಅಥವಾ ಯಾವುದೇ ಭಾಗದ ಇತರ ವಿಲೇವಾರಿ ಸಂದರ್ಭದಲ್ಲಿ (ಯಾವುದೇ ದಿವಾಳಿತನ ಅಥವಾ ಅಂತಹುದೇ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ)
  • ನಮ್ಮ ಹಕ್ಕುಗಳು, ಬಳಕೆದಾರರು, ವ್ಯವಸ್ಥೆಗಳು ಮತ್ತು ಸೇವೆಗಳನ್ನು ರಕ್ಷಿಸಲು.

ನಾವು ಖಾಸಗಿ ಡೇಟಾವನ್ನು ಎಲ್ಲಿ ಸಂಗ್ರಹಿಸುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ

ಟಿಎಂಎಲ್ ಒಂದು ಜಾಗತಿಕ ಸಂಸ್ಥೆಯಾಗಿ, ನಾವು ಸಂಗ್ರಹಿಸುವ ಮಾಹಿತಿಯನ್ನು ಈ ಗೌಪ್ಯತೆ ಸೂಚನೆ ಮತ್ತು ಡೇಟಾ ಇರುವಲ್ಲೆಲ್ಲಾ ಅನ್ವಯಿಸುವ ಕಾನೂನಿನ ಅವಶ್ಯಕತೆಗಳ ಪ್ರಕಾರ ಪ್ರಕ್ರಿಯೆಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಟಿಎಂಎಲ್‌ ಜಾಗತಿಕವಾಗಿ ಇರುವ ನಮ್ಮ ಕಚೇರಿಗಳಲ್ಲಿ ನೆಟ್‌ವರ್ಕ್‌ಗಳು, ಡೇಟಾಬೇಸ್‌ಗಳು, ಸರ್ವರ್‌ಗಳು, ಸಿಸ್ಟಮ್‌ಗಳು, ಬೆಂಬಲ ಮತ್ತು ಸಹಾಯ ಡೆಸ್ಕ್‌ಗಳನ್ನು ಹೊಂದಿದೆ. ನಮ್ಮ ವ್ಯಾಪಾರ, ಕಾರ್ಯಪಡೆ ಮತ್ತು ಗ್ರಾಹಕರ ಅಗತ್ಯ ಪೂರೈಸಲು ನಾವು ಕ್ಲೌಡ್ ಹೋಸ್ಟಿಂಗ್ ಸೇವೆಗಳು, ಸೇವೆ ಒದಗಿಸುವವರು ಮತ್ತು ವಿಶ್ವಾದ್ಯಂತ ಇರುವ ತಂತ್ರಜ್ಞಾನ ಬೆಂಬಲದಂತಹ ತೃತೀಯ ಪಕ್ಷದ ಜೊತೆಗೆ ಸಹಕರಿಸುತ್ತೇವೆ. ಅನ್ವಯಿಸುವ ಕಾನೂನಿನ ಪ್ರಕಾರ ಖಾಸಗಿ ಡೇಟಾವನ್ನು ಪ್ರಕ್ರಿಯೆಗೊಳಿಸಿ, ಭದ್ರವಾಗಿಸಲಾಗಿದೆ ಮತ್ತು ವರ್ಗಾಯಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಟಿಎಂಎಲ್ ನಿಮ್ಮ ಖಾಸಗಿ ಡೇಟಾವನ್ನು ಯಾರಿಗೂ ಮಾರಾಟ ಮಾಡುವುದಿಲ್ಲ ಅಥವಾ ಬಾಡಿಗೆಗೆ ನೀಡುವುದಿಲ್ಲ. ನೀವು ವಿನಂತಿಸಿದ ಉತ್ಪನ್ನ ಅಥವಾ ಸೇವೆಯನ್ನು ಒದಗಿಸಲು ಕೆಲವು ಸಂದರ್ಭಗಳಲ್ಲಿ, ಅಗತ್ಯವಿದ್ದರೆ ನಾವು ಟಿಎಂಎಲ್ ಅಥವಾ ತೃತೀಯ ಪಕ್ಷಗಳಿಗೆ ನಿಮ್ಮ ಖಾಸಗಿ ಡೇಟಾ ಬಹಿರಂಗಪಡಿಸಬಹುದು ಅಥವಾ ವರ್ಗಾಯಿಸಬೇಕಾಗಬಹುದು. ನಾವು ಖಾಸಗಿ ಮಾಹಿತಿಗಳನ್ನು ಇತರ ದೇಶಗಳಿಗೆ ವರ್ಗಾಯಿಸಿದಾಗ ಅವುಗಳು ನಿಮ್ಮ ತವರು ದೇಶದಲ್ಲಿರುವ ಡೇಟಾ ಗೌಪ್ಯತೆ ರಕ್ಷಣೆಯಂತಹ ಕಾನೂನುಗಳನ್ನು ಹೊಂದಿರದೆ ಇರಬಹುದು. ಆಗ ನಾವು ಸೂಕ್ತವಾದ ಮಟ್ಟದ ಡೇಟಾ ಗೌಪ್ಯತೆ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ. ಉದಾಹರಣೆಗೆ, ನಿಮ್ಮ ಖಾಸಗಿ ಮಾಹಿತಿಯನ್ನು ಸ್ವೀಕರಿಸುವವರು ಅದರ ರಕ್ಷಣೆ ಖಚಿತಪಡಿಸಿರುವ ಗ್ಯಾರಂಟಿ ಕೊಡಲು ನಾವು ಅನುಮೋದಿತ ಒಪ್ಪಂದದ ಷರತ್ತುಗಳು, ಬಹುಪಕ್ಷೀಯ ಡೇಟಾ ವರ್ಗಾವಣೆ ಒಪ್ಪಂದಗಳು, ಇಂಟ್ರಾಗ್ರೂಪ್ ಒಪ್ಪಂದಗಳನ್ನು ಮಾಡಿಕೊಳ್ಳುತ್ತೇವೆ.

ನಾವು ಖಾಸಗಿ ಡೇಟಾವನ್ನು ಹೇಗೆ ಸುರಕ್ಷಿತವಾಗಿರಿಸುತ್ತೇವೆ

ಟಿಎಂಎಲ್ ನಿಮ್ಮ ಖಾಸಗಿ ಡೇಟಾ ರಕ್ಷಿಸಲು ಸೂಕ್ತ ತಂತ್ರಜ್ಞಾನಗಳು ಮತ್ತು ಕಾರ್ಯವಿಧಾನಗಳನ್ನು ಬಳಸುತ್ತದೆ. ನಮ್ಮ ಮಾಹಿತಿ ಭದ್ರತಾ ನೀತಿಗಳು ಮತ್ತು ಕಾರ್ಯವಿಧಾನಗಳು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿವೆ ಮತ್ತು ನಮ್ಮ ವ್ಯಾಪಾರದ ಅಗತ್ಯತೆ, ತಂತ್ರಜ್ಞಾನದಲ್ಲಿನ ಬದಲಾವಣೆಗಳು ಮತ್ತು ನಿಯಂತ್ರಕ ಅಗತ್ಯತೆಗಳನ್ನು ಪೂರೈಸಲು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ. ಉದಾಹರಣೆಗೆ,

  • ನೀತಿಗಳು ಮತ್ತು ಕಾರ್ಯವಿಧಾನಗಳು: ನಷ್ಟ, ದುರುಪಯೋಗ, ಬದಲಾವಣೆ ಅಥವಾ ಉದ್ದೇಶಪೂರ್ವಕ ವಿನಾಶದಿಂದ ನಿಮ್ಮ ಖಾಸಗಿ ಡೇಟಾವನ್ನು ರಕ್ಷಿಸಲು ಟಿಎಂಎಲ್ ಸಮಂಜಸವಾದ ತಾಂತ್ರಿಕ, ಭೌತಿಕ ಮತ್ತು ಕಾರ್ಯಾಚರಣೆಯ ಭದ್ರತಾ ಕಾರ್ಯವಿಧಾನಗಳನ್ನು ಬಳಸಿಕೊಳ್ಳುತ್ತದೆ. ನಿಮ್ಮ ಬಗ್ಗೆ ಸಂಗ್ರಹಿಸಿದ ಎಲ್ಲಾ ಡೇಟಾಗೆ ಸೂಕ್ತ ಭದ್ರತೆಯನ್ನು ಒದಗಿಸುವ ಪ್ರಯತ್ನದಲ್ಲಿ ನಮ್ಮ ಭದ್ರತಾ ಕ್ರಮಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ.
  • ನಿಮ್ಮ ಖಾಸಗಿ ಡೇಟಾವನ್ನು ಪ್ರವೇಶಿಸಲು ನಾವು ಸೂಕ್ತ ನಿರ್ಬಂಧಗಳನ್ನು ಹಾಕುತ್ತೇವೆ.
  • ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ವರ್ಗಾಯಿಸಲು ನಾವು ಮೇಲ್ವಿಚಾರಣೆ ಮತ್ತು ಭೌತಿಕ ಕ್ರಮಗಳನ್ನು ಒಳಗೊಂಡಂತೆ ಸೂಕ್ತವಾದ ಭದ್ರತಾ ಕ್ರಮಗಳು ಮತ್ತು ನಿಯಂತ್ರಣಗಳನ್ನು ಜಾರಿಗೊಳಿಸುತ್ತೇವೆ
  • ಖಾಸಗಿ ಡೇಟಾ ಬಳಸಲು ಅವಕಾಶವಿರುವ ನಮ್ಮ ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಗೆ ನಿಯಮಿತ ಆಧಾರದ ಮೇಲೆ ನಮಗೆ ಗೌಪ್ಯತೆ, ಮಾಹಿತಿ ಭದ್ರತೆ ಮತ್ತು ಇತರ ಅನ್ವಯವಾಗುವ ತರಬೇತಿಯ ಅಗತ್ಯವಿದೆ
  • ನಮ್ಮ ಉದ್ಯೋಗಿಗಳು ಮತ್ತು ಗುತ್ತಿಗೆದಾರರು ನಮ್ಮ ಮಾಹಿತಿ ಭದ್ರತಾ ನೀತಿಗಳು ಮತ್ತು ಕಾರ್ಯವಿಧಾನಗಳು ಮತ್ತು ಯಾವುದೇ ಅನ್ವಯವಾಗುವ ಒಪ್ಪಂದದ ಷರತ್ತುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮ ಕೈಗೊಳ್ಳುತ್ತೇವೆ.
  • ನಮ್ಮ ಭದ್ರತಾ ನೀತಿಗಳು ಮತ್ತು ಕಾರ್ಯವಿಧಾನಗಳಿಗೆ ಅನುಸಾರವಾಗಿ ವಹಿಸಿಕೊಡಲಾದ ಯಾವುದೇ ಖಾಸಗಿ ಡೇಟಾವನ್ನು ಸಂರಕ್ಷಿಸಲು ನಮ್ಮ ತೃತೀಯ ಪಕ್ಷದ ಮಾರಾಟಗಾರರು ಮತ್ತು ಸೇವಾ ಸಂಸ್ಥೆಗಳೊಂದಿಗೆ ಸೂಕ್ತ ಒಪ್ಪಂದಗಳು ಮತ್ತು ಭದ್ರತಾ ವಿಮರ್ಶೆಗಳನ್ನು ನಾವು ಮಾಡಿಕೊಂಡಿರುತ್ತೇವೆ.

ಕುಕೀಸ್

ಕಾಲಕಾಲಕ್ಕೆ, ನಾವು ‘ಕುಕೀ’ ಎಂಬ ಪ್ರಮಾಣಿತ ತಂತ್ರಜ್ಞಾನವನ್ನು ಬಳಸಬಹುದು. ಕುಕೀ ಎನ್ನುವುದು ಕಂಪ್ಯೂಟರ್ ಅಥವಾ ಇತರ ಸಾಧನದಲ್ಲಿ ಇರಿಸಲಾದ ಸಣ್ಣ ಪಠ್ಯ ಫೈಲ್ ಆಗಿದೆ ಮತ್ತು ಬಳಕೆದಾರ ಅಥವಾ ಸಾಧನವನ್ನು ಗುರುತಿಸಲು ಮತ್ತು ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಕುಕೀಗಳನ್ನು ಸಾಮಾನ್ಯವಾಗಿ ಅವುಗಳ ಕಾರ್ಯ ಮತ್ತು ಯೋಜಿತ ಉದ್ದೇಶವನ್ನು ಅವಲಂಬಿಸಿ ನಾಲ್ಕು ವರ್ಗಗಳಲ್ಲಿ ನಿಯೋಜಿಸಲಾಗಿದೆ: ಅಗತ್ಯ ಕುಕೀಗಳು, ಕಾರ್ಯಕ್ಷಮತೆ ಕುಕೀಸ್, ಕ್ರಿಯಾತ್ಮಕ ಕುಕೀಗಳು ಮತ್ತು ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಕುಕೀಗಳು. ಇವುಗಳಲ್ಲಿ ಒಂದನ್ನು ನಿಯೋಜಿಸಲಾಗುತ್ತದೆ. ಕುಕೀಯು ನಿಮ್ಮ ಹಾರ್ಡ್ ಡ್ರೈವ್‌ನಿಂದ ಯಾವುದೇ ಇತರ ಡೇಟಾವನ್ನು ಹಿಂಪಡೆಯಲು ಸಾಧ್ಯವಿಲ್ಲ, ಕಂಪ್ಯೂಟರ್ ವೈರಸ್‌ಗಳನ್ನು ರವಾನಿಸಲು ಅಥವಾ ನಿಮ್ಮ ಇಮೇಲ್ ವಿಳಾಸವನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಪ್ರಸ್ತುತ, ವೆಬ್‌ಸೈಟ್‌ಗಳು ಬಳಕೆದಾರರ ಭೇಟಿಯನ್ನು ಹೆಚ್ಚಿಸಲು ಕುಕೀಗಳನ್ನು ಬಳಸುತ್ತವೆ; ಸಾಮಾನ್ಯವಾಗಿ, ಕುಕೀಗಳು ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು, ಮುಖಪುಟಗಳನ್ನು ವೈಯಕ್ತೀಕರಿಸಬಹುದು ಮತ್ತು ಸೈಟ್‌ನ ಯಾವ ಭಾಗಗಳಿಗೆ ಭೇಟಿ ನೀಡಲಾಗಿದೆ ಎಂಬುದನ್ನು ಗುರುತಿಸಬಹುದು. ಕುಕೀಯನ್ನು ಇರಿಸಿದಾಗ ನಿಮಗೆ ತಿಳಿಸಲು ನಿಮ್ಮ ಬ್ರೌಸರ್ ಅನ್ನು ಹೊಂದಿಸಲು ಸಾಧ್ಯವಿದೆ. ಈ ರೀತಿಯಾಗಿ ಕುಕೀಯನ್ನು ಸ್ವೀಕರಿಸಬೇಕೆ ಎಂದು ನಿರ್ಧರಿಸಲು ನಿಮಗೆ ಅವಕಾಶವಿದೆ. ನಮ್ಮ ಸಂದರ್ಶಕರು ಈ ವೆಬ್ ಸೈಟ್ ಅನ್ನು ಹೇಗೆ ಮತ್ತು ಯಾವಾಗ ಬಳಸುತ್ತಾರೆ ಎಂಬುದನ್ನು ತೋರಿಸುವ ಮೂಲಕ, ನಮ್ಮ ಸೈಟ್ ಅನ್ನು ನಿರಂತರವಾಗಿ ಸುಧಾರಿಸಲು ಕುಕೀ ನೀಡುವ ಮಾಹಿತಿಯು ನಮಗೆ ನೆರವಾಗುತ್ತದೆ. ನೀವು ನಿರ್ದಿಷ್ಟವಾಗಿ ನಮಗೆ ಹೆಚ್ಚುವರಿ ಮಾಹಿತಿ ನೀಡದ ಹೊರತು ಕುಕೀಗಳು ನಿಮ್ಮ ಬಗ್ಗೆ ಖಾಸಗಿಯಾಗಿ ಏನನ್ನೂ ಹೇಳುವುದಿಲ್ಲ. ನಮ್ಮಿಂದ ಅಥವಾ ತೃತೀಯ ಪಕ್ಷದಿಂದ ಪಡೆದ ಯಾವುದೇ ಖಾಸಗಿ ಗುರುತಿಸಬಹುದಾದ ಮಾಹಿತಿಯೊಂದಿಗೆ ಟಿಎಂಎಲ್ ನಮ್ಮ ಕುಕೀ ಮಾಹಿತಿಯನ್ನು ವಿಲೀನಗೊಳಿಸುವುದಿಲ್ಲ ಅಥವಾ ಸಂಯೋಜಿಸುವುದಿಲ್ಲ.

ನಾವು ಕುಕೀಗಳನ್ನು ಇದಕ್ಕಾಗಿ ಬಳಸಬಹುದು: (i) ವೆಬ್‌ಸೈಟ್‌ಗೆ ನಿಮ್ಮ ಭೇಟಿಗಳ ಸಂಖ್ಯೆಯನ್ನು ಎಣಿಸಲು; (ii) ವೆಬ್‌ಸೈಟ್ ಬಳಕೆಯ ಮೇಲೆ ಅನಾಮಧೇಯ, ಒಟ್ಟು, ಅಂಕಿಅಂಶಗಳ ಮಾಹಿತಿಯನ್ನು ಸಂಗ್ರಹಿಸಲು; (iii) ನಿಮ್ಮ ಅಗತ್ಯ ಅಥವಾ ವೀಕ್ಷಣೆಯ ಇತಿಹಾಸದ ಪ್ರಕಾರ ಸೂಕ್ತವಾದ ವಿಷಯವನ್ನು ಒದಗಿಸಲು; ಮತ್ತು (iv) ನಿಮ್ಮ ಪಾಸ್‌ವರ್ಡ್ ಅನ್ನು ಉಳಿಸುತ್ತದೆ (ನೀವು ಹಾಗೆ ಮಾಡಲು ಅನುಮತಿಸಿದಾಗ ಮಾತ್ರ). ಅದರ ಮೂಲಕ ನೀವು ನಮ್ಮ ಸೈಟ್‌ಗಳಿಗೆ ಭೇಟಿ ನೀಡಿದ ಪ್ರತಿ ಬಾರಿ ಅದನ್ನು ಮರು-ನಮೂದಿಸಬೇಕಾಗುವ ಅಗತ್ಯವಿರುವುದಿಲ್ಲ. ನೀವು ಕುಕೀಗಳನ್ನು ಸಹ ನಿಷ್ಕ್ರಿಯಗೊಳಿಸಬಹುದು. ನಿಮ್ಮ ಬ್ರೌಸರ್ ಪ್ರಾಶಸ್ತ್ಯಗಳನ್ನು ಮಾರ್ಪಡಿಸುವ ಮೂಲಕ, ನೀವು ಎಲ್ಲಾ ಕುಕೀಗಳನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು ಅಥವಾ ಕುಕೀಯನ್ನು ಹೊಂದಿಸಿದಾಗ ಅಧಿಸೂಚನೆ ವಿನಂತಿಸಬಹುದು.

ಕಟ್ಟುನಿಟ್ಟಾಗಿ ಅಗತ್ಯ ಕುಕೀಸ್

ವೆಬ್‌ಸೈಟ್‌ನ ಸರಿಯಾದ ಕಾರ್ಯನಿರ್ವಹಣೆಗೆ ಈ ಕುಕೀಗಳು ಅಗತ್ಯವಾಗಿವೆ, ಉದಾಹರಣೆಗೆ ವಿಷಯವನ್ನು ಪ್ರದರ್ಶಿಸುವುದು, ಲಾಗ್ ಇನ್ ಮಾಡುವುದು, ನಿಮ್ಮ ಸೆಶನ್ ಅನ್ನು ಮೌಲ್ಯೀಕರಿಸುವುದು, ಸೇವೆಗಳಿಗಾಗಿ ನಿಮ್ಮ ವಿನಂತಿಗೆ ಪ್ರತಿಕ್ರಿಯಿಸುವುದು ಮತ್ತು ಇತರ ಕಾರ್ಯಗಳು. ಕುಕೀಗಳ ಬಳಕೆಯನ್ನು ನಿಷ್ಕ್ರಿಯಗೊಳಿಸಲು ಹೆಚ್ಚಿನ ವೆಬ್ ಬ್ರೌಸರ್‌ಗಳನ್ನು ಹೊಂದಿಸಬಹುದು. ಆದರೆ, ನೀವು ಈ ಕುಕೀಗಳನ್ನು ನಿಷ್ಕ್ರಿಯಗೊಳಿಸಿದರೆ, ನಮ್ಮ ವೆಬ್‌ಸೈಟ್‌ನಲ್ಲಿನ ವೈಶಿಷ್ಟ್ಯಗಳನ್ನು ಸರಿಯಾಗಿ ಅಥವಾ ಸಂಪೂರ್ಣವಾಗಿ ಪ್ರವೇಶಿಸಲು ನಿಮಗೆ ಸಾಧ್ಯವಾಗದಿರಬಹುದು.

ಮಕ್ಕಳು

ನಾವು ಮಕ್ಕಳಿಗೆ ನೇರವಾಗಿ ಸೇವೆ ಒದಗಿಸುವುದಿಲ್ಲ ಅಥವಾ ಅವರ ಖಾಸಗಿ ಮಾಹಿತಿಯನ್ನು ಪೂರ್ವಭಾವಿಯಾಗಿ ಸಂಗ್ರಹಿಸುವುದಿಲ್ಲ. ಟಿಎಂಎಲ್‌ ಸೈಟ್‌ಗೆ ಮಕ್ಕಳ ಪ್ರವೇಶ ಮತ್ತು ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಸೇರಿದಂತೆ ಅವರ ನಡವಳಿಕೆಗೆ ಎಲ್ಲಾ ಜವಾಬ್ದಾರಿ ಮತ್ತು ಕಾನೂನು ಹೊಣೆಗಾರಿಕೆಯನ್ನು ಪೋಷಕರು ವಹಿಸಿಕೊಂಡರೆ, ನಮ್ಮ ವೆಬ್‌ಸೈಟ್ ಬಳಸಲು ಮಕ್ಕಳಿಗೆ ಅಧಿಕಾರ ನೀಡಬಹುದು.

ಮಗುವಿನ ಖಾಸಗಿ ಡೇಟಾವನ್ನು ಪೋಷಕರ ಒಪ್ಪಿಗೆಯಿಲ್ಲದೆ ಸಂಗ್ರಹಿಸಲಾಗಿದೆ ಎಂದು ಟಿಎಂಎಲ್‌ ತಿಳಿದುಕೊಂಡರೆ, ಅಂತಹ ಮಾಹಿತಿಯನ್ನು ಅಳಿಸಲು ಟಿಎಂಎಲ್‌ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಮಗು ತನ್ನ/ಅವಳ ಡೇಟಾವನ್ನು ಟಿಎಂಎಲ್‌ಗೆ ಸಲ್ಲಿಸಿರುವುದು ಕಂಡಲ್ಲಿ, ಮೂಲಕ ವಿನಂತಿಸಿ ಟಿಎಂಎಲ್‌ನ ಡೇಟಾಬೇಸ್‌ನಿಂದ ಅಂತಹ ಡೇಟಾವನ್ನು ಅಳಿಸಲು ವಿನಂತಿಸಬಹುದು. ವಿನಂತಿ ಸ್ವೀಕರಿಸಿದ ನಂತರ, ಟಿಎಂಎಲ್‌ ತನ್ನ ಡೇಟಾಬೇಸ್‌ನಿಂದ ಅಂತಹ ಮಾಹಿತಿಯನ್ನು ಅಳಿಸುವ ಖಾತರಿ ನೀಡುತ್ತದೆ.

ಪರಿಶೀಲಿಸುವ ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳ ಖಾಸಗಿ ಡೇಟಾ ಸಂಗ್ರಹಿಸಲಾಗಿದೆ ಎಂದು ಟಿಎಂಎಲ್‌ಗೆ ಅರಿವಾದಲ್ಲಿ, ಅಂತಹ ಮಾಹಿತಿಯನ್ನು ಅಳಿಸಲು ಟಿಎಂಎಲ್‌ ಸೂಕ್ತ ಕ್ರಮ ಕೈಗೊಳ್ಳಬಹುದು. ಆದರೆ, ನಿಮ್ಮ ಮಕ್ಕಳು ತನ್ನ/ಅವಳ ಡೇಟಾವನ್ನು ಟಿಎಂಎಲ್‌ ಗೆ ಸಲ್ಲಿಸಿರುವುದು ತಿಳಿದಲ್ಲಿ, ಇಮೇಲ್ ವಿನಂತಿ ಕಳುಹಿಸಿ ಟಿಎಂಎಲ್‌ಡೇಟಾಬೇಸ್‌ನಿಂದ ಅಂತಹ ಡೇಟಾವನ್ನು ಅಳಿಸಲು ಕೇಳಿಕೊಳ್ಳಬಹುದು. ವಿನಂತಿ ಸ್ವೀಕರಿಸಿದ ನಂತರ, ಟಿಎಂಎಲ್‌ ತನ್ನ ಡೇಟಾಬೇಸ್‌ನಿಂದ ಅಂತಹ ಮಾಹಿತಿಯನ್ನು ಅಳಿಸುವುದನ್ನು ಖಚಿತಪಡಿಸುತ್ತದೆ.

ನಿಮ್ಮ ಹಕ್ಕುಗಳು ಮತ್ತು ನಿಮ್ಮ ಖಾಸಗಿ ಡೇಟಾ

ಮಾಹಿತಿ ಪ್ರವೇಶಿಸುವ ಮತ್ತು ನಿಯಂತ್ರಿಸುವ ನಿಮ್ಮ ಹಕ್ಕನ್ನು ನಾವು ಗೌರವಿಸುತ್ತೇವೆ ಮತ್ತು ಮಾಹಿತಿಗಾಗಿ ವಿನಂತಿಗಳಿಗೆ ನಾವು ಪ್ರತಿಕ್ರಿಯಿಸುತ್ತೇವೆ ಮತ್ತು ಅನ್ವಯವಾಗುವಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಸರಿಪಡಿಸುತ್ತೇವೆ, ತಿದ್ದುಪಡಿ ಮಾಡುತ್ತೇವೆ ಅಥವಾ ಅಳಿಸುತ್ತೇವೆ.

ಅಂತಹ ಸಂದರ್ಭಗಳಲ್ಲಿ, ನೀವು ಈ ಹಕ್ಕುಗಳನ್ನು ಚಲಾಯಿಸುವ ಮೊದಲು ನಿಮ್ಮ ಗುರುತಿನ ಪುರಾವೆಯೊಂದಿಗೆ ಪ್ರತಿಕ್ರಿಯಿಸುವ ಅಗತ್ಯವಿದೆ.

  • ಮಾಹಿತಿ ಪ್ರವೇಶಿಸುವ ಹಕ್ಕು: ಯಾವುದೇ ಹಂತದಲ್ಲಿ ನಾವು ನಿಮ್ಮ ಬಗ್ಗೆ ಹೊಂದಿರುವ ಮಾಹಿತಿಯ ವಿವರಕ್ಕಾಗಿ, ನಾವು ಆ ಮಾಹಿತಿಯನ್ನು ಏಕೆ ಹೊಂದಿದ್ದೇವೆ, ಯಾರು ಮಾಹಿತಿಗೆ ಪ್ರವೇಶವನ್ನು ಹೊಂದಿದ್ದಾರೆ ಮತ್ತು ನಾವು ಮಾಹಿತಿಯನ್ನು ಎಲ್ಲಿಂದ ಪಡೆದಿದ್ದೇವೆ ಎಂದು ತಿಳಿಯಲು ನಮ್ಮನ್ನು ಸಂಪರ್ಕಿಸಬಹುದು. ಮೊದಲ ವಿನಂತಿಗೆ ಯಾವುದೇ ಶುಲ್ಕಗಳಿಲ್ಲ. ಆದರೆ ಅದೇ ಡೇಟಾಕ್ಕಾಗಿ ಹೆಚ್ಚುವರಿ ವಿನಂತಿಗಳಿಗೆ ಆಡಳಿತಾತ್ಮಕ ಶುಲ್ಕ ವಿಧಿಸಬಹುದು. ಪ್ರವೇಶವನ್ನು ವಿನಂತಿಸಲು ನೀವು ಕಾರಣ ಒದಗಿಸಬೇಕಾಗಿಲ್ಲ, ಆದರೆ ನಿಮ್ಮ ಗುರುತಿನ ಕೆಲವು ಸಮಂಜಸ ಪುರಾವೆ ಒದಗಿಸಬೇಕಾಗುತ್ತದೆ.
  • ಮಾಹಿತಿ ಸರಿಪಡಿಸುವ ಮತ್ತು ನವೀಕರಿಸುವ ಹಕ್ಕು: ನಾವು ನಿಮ್ಮ ಬಗ್ಗೆ ಸಂಗ್ರಹಿಸಿದ ಡೇಟಾ ಹಳೆಯದಾಗಿದ್ದರೆ, ಅಪೂರ್ಣ ಅಥವಾ ತಪ್ಪಾಗಿದ್ದರೆ, ನೀವು ನಮಗೆ ತಿಳಿಸಬಹುದು ಮತ್ತು ನಿಮ್ಮ ಡೇಟಾ ನವೀಕರಿಸಲಾಗುತ್ತದೆ.
  • ನಿಮ್ಮ ಮಾಹಿತಿಯನ್ನು ಅಳಿಸುವ ಹಕ್ಕು: ನಾವು ಇನ್ನು ಮುಂದೆ ನಿಮ್ಮ ಡೇಟಾ ಬಳಸಬಾರದು ಅಥವಾ ನಾವು ನಿಮ್ಮ ಡೇಟಾವನ್ನು ಕಾನೂನುಬಾಹಿರವಾಗಿ ಬಳಸುತ್ತಿದ್ದೇವೆ ಎಂದು ನೀವು ಭಾವಿಸಿದರೆ, ನಾವು ಹೊಂದಿರುವ ಡೇಟಾ ಅಳಿಸುವಂತೆ ನೀವು ವಿನಂತಿಸಬಹುದು. ನಿಮ್ಮ ವಿನಂತಿ ಸ್ವೀಕರಿಸಿದಾಗ, ಡೇಟಾವನ್ನು ಅಳಿಸಲಾಗಿದೆಯೇ ಅಥವಾ ಅದನ್ನು ಅಳಿಸಲು ಸಾಧ್ಯವಾಗದ ಕಾರಣವನ್ನು ನಾವು ಖಚಿತಪಡಿಸುತ್ತೇವೆ (ಉದಾಹರಣೆಗೆ ನಮಗೆ ಇದು ನಮ್ಮ ಕಾನೂನುಬದ್ಧ ಆಸಕ್ತಿಗಳು ಅಥವಾ ನಿಯಂತ್ರಕ ಉದ್ದೇಶ(ಗಳು) ಗಾಗಿ ಅಗತ್ಯವಿದೆ.
  • ಪ್ರಕ್ರಿಯೆ ವಿರೋಧಿಸುವ ಹಕ್ಕು: ನಿಮ್ಮ ಡೇಟಾ ಪ್ರಕ್ರಿಯೆ ನಿಲ್ಲಿಸುವಂತೆ ವಿನಂತಿಸುವ ಹಕ್ಕು ನಿಮಗೆ ಇದೆ. ವಿನಂತಿ ಸ್ವೀಕರಿಸಿದ ನಂತರ, ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಮತ್ತು ವಿನಂತಿ ಅನುಸರಿಸಲು ಸಾಧ್ಯವೇ ಅಥವಾ ನಿಮ್ಮ ಡೇಟಾ ಪ್ರಕ್ರಿಯೆ ಮುಂದುವರಿಸಲು ನಾವು ಕಾನೂನುಬದ್ಧ ಆಧಾರಗಳನ್ನು ಹೊಂದಿದ್ದೇವೆಯೇ ಎಂದು ನಿಮಗೆ ತಿಳಿಸುತ್ತೇವೆ. ನೀವು ಆಕ್ಷೇಪಿಸುವ ಹಕ್ಕನ್ನು ಚಲಾಯಿಸಿದ ನಂತರವೂ, ನಿಮ್ಮ ಇತರ ಹಕ್ಕುಗಳನ್ನು ಅನುಸರಿಸಲು ಅಥವಾ ಕಾನೂನು ಹಕ್ಕುಗಳನ್ನು ತರಲು ಅಥವಾ ರಕ್ಷಿಸಲು ನಾವು ನಿಮ್ಮ ಡೇಟಾ ಸಂಗ್ರಹ ಮುಂದುವರಿಸಬಹುದು.
  • ಡೇಟಾ ಪೋರ್ಟೆಬಿಲಿಟಿ ಹಕ್ಕು: ನಿಮ್ಮ ಕೆಲವು ಡೇಟಾವನ್ನು ಇನ್ನೊಂದು ನಿಯಂತ್ರಕಕ್ಕೆ ವರ್ಗಾಯಿಸಲು ವಿನಂತಿಸುವ ಹಕ್ಕನ್ನು ನೀವು ಹೊಂದಿದ್ದೀರಿ. ನಿಮ್ಮ ವಿನಂತಿ ಸ್ವೀಕರಿಸಿದ ಒಂದು ತಿಂಗಳೊಳಗೆ ಅದನ್ನು ಅನುಸರಿಸುತ್ತೇವೆ.
  • ನಿಮ್ಮ ವಿನಂತಿ ಹಿಂಪಡೆಯುವ ಹಕ್ಕು: ಸಮ್ಮತಿ ಕೋರಿದ ಡೇಟಾದ ಯಾವುದೇ ಪ್ರಕ್ರಿಯೆಗೆ ಯಾವುದೇ ಸಮಯದಲ್ಲಿ ನೀಡಲಾದ ಒಪ್ಪಿಗೆಯನ್ನು ಹಿಂಪಡೆಯುವ ಹಕ್ಕು. ನೀವು ದೂರವಾಣಿ, ಇಮೇಲ್ ಅಥವಾ ಪೋಸ್ಟ್ ಮೂಲಕ ನಿಮ್ಮ ಸಮ್ಮತಿಯನ್ನು ಸುಲಭವಾಗಿ ಹಿಂಪಡೆಯಬಹುದು (ಸಮ್ಮತಿ ವಾಪಸಾತಿ ನಮೂನೆಯನ್ನು ನೋಡಿ).
  • ಪ್ರಕ್ರಿಯೆ ವಿರೋಧಿಸುವ ಹಕ್ಕು: ಅನ್ವಯವಾಗುವಲ್ಲಿ ಖಾಸಗಿ ಡೇಟಾದ ಪ್ರಕ್ರಿಯೆಗೆ ಆಕ್ಷೇಪಿಸುವ ಹಕ್ಕು.
  • ದೂರು ಸಲ್ಲಿಸುವ ಹಕ್ಕು: ಡೇಟಾ ಸಂರಕ್ಷಣಾ ಪ್ರತಿನಿಧಿಗೆ ದೂರು ಸಲ್ಲಿಸುವ ಹಕ್ಕು.
  • ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಿ ನಿಮಗೆ ಮಾರ್ಕೆಟಿಂಗ್ ಸಂದೇಶಗಳನ್ನು ಕಳುಹಿಸದಂತೆ ನಮ್ಮನ್ನು ಅಥವಾ ತೃತೀಯ ಪಕ್ಷವನ್ನು ಕೇಳಬಹುದು. ಈ ಮಾರ್ಕೆಟಿಂಗ್ ಸಂದೇಶಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿದರೆ, ಅದು ಉತ್ಪನ್ನ/ಸೇವೆ ಖರೀದಿ, ವಾರಂಟಿ ನೋಂದಣಿ, ಉತ್ಪನ್ನ/ಸೇವಾ ಅನುಭವ ಅಥವಾ ಇತರ ವಹಿವಾಟುಗಳ ಪರಿಣಾಮವಾಗಿ ನಮಗೆ ಒದಗಿಸಲಾದ ಖಾಸಗಿ ಡೇಟಾಗೆ ಅನ್ವಯಿಸುವುದಿಲ್ಲ.
  • ನಮ್ಮಿಂದ ಅಥವಾ ನಮ್ಮ ಅಂಗಸಂಸ್ಥೆಗಳಿಂದ ಹೆಚ್ಚಿನ ಇಮೇಲ್ ಪತ್ರವ್ಯವಹಾರವನ್ನು ಸ್ವೀಕರಿಸುವುದರಿಂದ ನೀವು ಯಾವಾಗಲೂ ಹೊರಗುಳಿಯಬಹುದು. ನಮ್ಮ ಉದ್ಯಮದ ಮಾರಾಟ ಅಥವಾ ವರ್ಗಾವಣೆ, ಅಥವಾ ನಮ್ಮ ಕಂಪನಿ ದಿವಾಳಿಯಾಗುವ ಹೊರತಾಗಿ, ನಾವು ನಿಮ್ಮ ಇಮೇಲ್ ವಿಳಾಸವನ್ನು ಯಾವುದೇ ಅಂಗಸಂಸ್ಥೆಯಲ್ಲದ ತೃತೀಯ ಪಕ್ಷಕ್ಕೆ ನಿಮ್ಮ ಒಪ್ಪಿಗೆ ಇಲ್ಲದೆ ಮಾರುವುದು, ಬಾಡಿಗೆ ನೀಡುವುದು ಅಥವಾ ವ್ಯಾಪಾರ ಮಾಡುವುದಿಲ್ಲ.

ನಿಮ್ಮ ಖಾಸಗಿ ಡೇಟಾವನ್ನು ನಾವು ಎಷ್ಟು ಸಮಯ ಸಂಗ್ರಹಿಸಿಡುತ್ತೇವೆ?

ಕಾನೂನು ಅಥವಾ ವ್ಯಾಪಾರ ಉದ್ದೇಶಗಳಿಗಾಗಿ ನಮಗೆ ಸಮಂಜಸವಾಗಿ ಅಗತ್ಯವಿರುವವರೆಗೆ ನಾವು ಖಾಸಗಿ ಮಾಹಿತಿ ಉಳಿಸಿಕೊಳ್ಳುತ್ತೇವೆ. ಡೇಟಾ ಧಾರಣ ಅವಧಿ ನಿರ್ಧರಿಸುವಲ್ಲಿ, ಟಿಎಂಎಲ್‌ ಸ್ಥಳೀಯ ಕಾನೂನುಗಳು, ಒಪ್ಪಂದದ ಬಾಧ್ಯತೆಗಳು ಮತ್ತು ನಮ್ಮ ಗ್ರಾಹಕರ ನಿರೀಕ್ಷೆಗಳು ಮತ್ತು ಅವಶ್ಯಕತೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ನಮಗೆ ಇನ್ನು ಮುಂದೆ ಖಾಸಗಿ ಮಾಹಿತಿ ಅಗತ್ಯವಿಲ್ಲದಿದ್ದಾಗ, ಅದನ್ನು ಸುರಕ್ಷಿತವಾಗಿ ಅಳಿಸುತ್ತೇವೆ ಅಥವಾ ನಾಶಪಡಿಸುತ್ತೇವೆ.

ಬದಲಾವಣೆಗಳು

ಟಿಎಂಎಲ್‌ ಕಾಲಕಾಲಕ್ಕೆ ಗೌಪ್ಯತೆ ನೀತಿ ನವೀಕರಿಸಬಹುದು. ಪ್ರಸ್ತುತ ಗೌಪ್ಯತಾ ನೀತಿ ನೋಡಲು ನಮ್ಮ ವೆಬ್‌ಸೈಟ್ ಅನ್ನು ಆಗಾಗ್ಗೆ ಪರಿಶೀಲಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಇದರಿಂದ ನಿಮ್ಮ ಮಾಹಿತಿ ಟಿಎಂಎಲ್‌ ಹೇಗೆ ಬಳಸುತ್ತದೆ ಮತ್ತು ರಕ್ಷಿಸುತ್ತದೆ ಎಂಬುದರ ಕುರಿತು ನಿಮಗೆ ಮಾಹಿತಿ ಇರುತ್ತದೆ. ಈ ನೀತಿಗೆ ಬದಲಾವಣೆಯು ಗಮನಾರ್ಹವಾದಾಗ, ನಾವು ಈ ವೆಬ್‌ಸೈಟ್‌ನಲ್ಲಿ ಪ್ರಮುಖ ಸೂಚನೆ ನೀಡುತ್ತೇವೆ ಮತ್ತು ನವೀಕರಿಸಿದ ಪರಿಣಾಮಕಾರಿ ದಿನಾಂಕ ಒದಗಿಸುತ್ತೇವೆ.

ಒದಗಿಸಿದ ಡೇಟಾದ ರಕ್ಷಣೆ

ನಮಗೆ ಒದಗಿಸಲಾದ ನಿಮ್ಮ ಖಾಸಗಿ ಡೇಟಾ ರಕ್ಷಿಸಲು ನಾವು ಕಠಿಣ ಭದ್ರತಾ ಕ್ರಮಗಳನ್ನು ಹೊಂದಿದ್ದೇವೆ. ಎಲ್ಲಾ ಖಾಸಗಿ ಮಾಹಿತಿಯನ್ನು ಸುರಕ್ಷಿತ ರೀತಿಯಲ್ಲಿ ಸಂಗ್ರಹಿಸುತ್ತೇವೆ, ಅದರ ನಷ್ಟ, ದುರುಪಯೋಗ, ತಪ್ಪಾದ ಬಹಿರಂಗಪಡಿಸುವಿಕೆ, ಬದಲಾವಣೆ ಅಥವಾ ನಾಶ ತಡೆಯುತ್ತೇವೆ. ಹೇಳಲಾದ ಭದ್ರತಾ ಕ್ರಮಗಳನ್ನು ನಿಯಮಿತವಾಗಿ ನವೀಕರಿಸಲಾಗುತ್ತದೆ. ಆದರೆ ಯಾವುದೇ ಅನಪೇಕ್ಷಿತ ನಷ್ಟ, ದುರುಪಯೋಗ, ಬದಲಾವಣೆ ಅಥವಾ ಅಂತಹ ಮಾಹಿತಿಯ ಬಹಿರಂಗಪಡಿಸುವಿಕೆ ಸೇರಿದಂತೆ ಖಾಸಗಿ ಮಾಹಿತಿಯ ಇಂಟರ್ನೆಟ್ ಪ್ರಸರಣದ ಸಮಯದಲ್ಲಿ ಭದ್ರತೆಯ ಉಲ್ಲಂಘನೆಗೆ ಟಿಎಂಎಲ್ ಹೊಣೆಗಾರರಲ್ಲ. ಇದಲ್ಲದೆ, ಈ ಗೌಪ್ಯತಾ ನೀತಿಯಲ್ಲಿ ಏನೇ ಇದ್ದರೂ, ಯಾವುದೇ ನಷ್ಟ, ಹಾನಿ ಅಥವಾ ಖಾಸಗಿ ಮಾಹಿತಿಯ ದುರುಪಯೋಗಕ್ಕೆ ಟಿಎಂಎಲ್ ಹೊಣೆಗಾರರಲ್ಲ., ಅಂತಹ ನಷ್ಟ, ಹಾನಿ ಅಥವಾ ದುರುಪಯೋಗವು ತಪ್ಪಿಸಲಾಗದ ಕಾರಣಕ್ಕೆ ಆಗಿದ್ದರೆ ಅಥವಾ ಸಕಾರಣ ನೀಡಲು ಸಾಧ್ಯವಾಗದಿದ್ದರೆ ಟಿಎಂಎಲ್ ಹೊಣೆಗಾರರಲ್ಲ.

ಟಿಎಂಎಲ್‌ ನಿಮ್ಮ ಖಾಸಗಿ ಡೇಟಾವನ್ನು ಉತ್ತಮ ನಂಬಿಕೆಯಿಂದ ಅಥವಾ ಕಾನೂನು ಬಾಧ್ಯತೆ ಅನುಸರಿಸಲು ಅಗತ್ಯವಿದ್ದಾಗ ಅಥವಾ ಯಾವುದೇ ಕಾನೂನಿನಿಂದ ಅಥವಾ ಯಾವುದೇ ಸಮರ್ಥ ನ್ಯಾಯಾಲಯ ಅಥವಾ ಶಾಸನಬದ್ಧ ಪ್ರಾಧಿಕಾರದ ಆದೇಶದ ಮೂಲಕ ಟಿಎಂಎಲ್‌ನ ಕಾನೂನು ಹಕ್ಕುಗಳು ಅಥವಾ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಮತ್ತು ರಕ್ಷಿಸಲು ಅಗತ್ಯವಿದ್ದಾಗ ಬಹಿರಂಗಪಡಿಸಬಹುದು.

ನಿಮ್ಮ ಹೊಣೆಗಾರಿಕೆ

ಈ ಬಳಕೆಯ ನಿಯಮಗಳಿಗೆ ವಿರುದ್ಧವಾಗಿ ಕಾನೂನುಬಾಹಿರ ಅಥವಾ ನಿಷೇಧಿಸಲಾದ ಯಾವುದೇ ಉದ್ದೇಶಕ್ಕಾಗಿ ನೀವು ವೆಬ್‌ಸೈಟ್ ಅನ್ನು ಬಳಸುವುದಿಲ್ಲ ಎಂದು ನೀವು ಟಿಎಂಎಲ್‌ಗೆ ಖಾತರಿ ನೀಡುತ್ತೀರಿ. ನೀವು ಈ ವೆಬ್‌ಸೈಟ್‌ಗೆ ಹಾನಿ, ನಿಷ್ಕ್ರಿಯಗೊಳಿಸುವುದು, ಮಿತಿಮೀರಿದ ಬಳಕೆ ಅಥವಾ ದುರ್ಬಲಗೊಳಿಸುವುದು ಅಥವಾ ಯಾವುದೇ ಇತರ ಪಕ್ಷದ ಬಳಕೆಗೆ ಅವಕಾಶ ಕೊಡುವುದು ಮತ್ತು ಈ ವೆಬ್‌ಸೈಟ್ ಬಳಸುವ ಸಂತೋಷಕ್ಕೆ ಅಡ್ಡಿ ಮಾಡಬಾರದು. ಇದನ್ನು ನೀವು ಮಾರ್ಪಡಿಸಬಾರದು, ನಕಲಿಸಬಾರದು, ವಿತರಿಸಬಾರದು, ಪ್ರಸಾರ ಮಾಡಬಾರದು, ಪ್ರದರ್ಶಿಸಬಾರದು, ಪುನರುತ್ಪಾದಿಸಬಾರದು, ಪ್ರಕಟಿಸಬಾರದು. ಯಾವುದೇ ಮಾಧ್ಯಮದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ನಮ್ಮ ಪೂರ್ವಾನುಮತಿಯಿಲ್ಲದೆ ಟಿಎಂಎಲ್‌ ವೆಬ್‌ಸೈಟ್‌ನಿಂದ ಪಡೆದ ಯಾವುದೇ ಡೇಟಾ, ಸೇವೆಗಳಿಂದ ಮರುಸೃಷ್ಟಿಯ ಕೃತಿಗಳನ್ನು ರಚಿಸಿ, ವರ್ಗಾಯಿಸಿ ಅಥವಾ ಮಾರಾಟ ಮಾಡಬಾರದು. ಖಾಸಗಿ ಮತ್ತು ವಾಣಿಜ್ಯೇತರ ಬಳಕೆಯನ್ನು ಹೊರತುಪಡಿಸಿ ಈ ಸಾಮಗ್ರಿಗಳನ್ನು ಅಥವಾ ಅದರ ಯಾವುದೇ ಭಾಗವನ್ನು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಬಾರದು.

ಆಡಳಿತದ ಕಾನೂನು/ ವ್ಯಾಪ್ತಿ

ಈ ಗೌಪ್ಯತಾ ನೀತಿಯು ಭಾರತದ ಕಾನೂನುಗಳಿಂದ ನಿಯಂತ್ರಣಕ್ಕೆ ಒಳಪಟ್ಟಿದೆ; ಮತ್ತು ಮುಂಬೈ (ಭಾರತ) ನ್ಯಾಯಾಲಯಗಳು ಯಾವುದೇ ವಿವಾದವನ್ನು ಎದುರಿಸಲು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ.

ಪ್ರಶ್ನೆಗಳು/ ಸಂಪರ್ಕ ಮಾಹಿತಿ

ಈ ಗೌಪ್ಯತಾ ಸೂಚನೆ ನೀತಿಯ ಕುರಿತು ನೀವು ಪ್ರಶ್ನೆಗಳು ಅಥವಾ ಅಭಿಪ್ರಾಯ ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಇಲ್ಲಿ ಸಂಪರ್ಕಿಸಿ: dpr@tatamotors.com

ಇಮೇಲ್: dpr@tatamotors.com

ಅನ್ವಯಿಸುವ ದಿನಾಂಕ: 23.03.22