Loading...

ಟಾಟಾ ಯೋಧಾ ಪಿಕಪ್ ಬಗ್ಗೆ

  • ಟಾಟಾ ಯೋಧಾ ಒಂದು ಅತ್ಯುನ್ನತ ಇಂಜಿನಿಯರಿಂಗ್ ವಸ್ತುವಿಗಿಂತಲೂ ಹೆಚ್ಚಿನ ಹಿರಿಮೆ ಹೊಂದಿದೆ. ಯಶಸ್ಸಿನ ದಾರಿಯಲ್ಲಿ ತಡೆಯಿಲ್ಲದೆ ಮುನ್ನುಗ್ಗುತ್ತಿರುವ ನಮ್ಮ ಗ್ರಾಹಕರ ಹೋರಾಟದ ಸ್ಫೂರ್ತಿಯನ್ನು ಅದು ಪ್ರತಿಫಲಿಸುತ್ತದೆ. ಅವರ ಕೆಚ್ಚೆದೆಯ ಮಹಾತ್ವಾಕಾಂಕ್ಷೆಗಳ ನಿರೀಕ್ಷೆಯ ಪಯಣದಲ್ಲಿ ನಾವು ಅವರ ಜೊತೆಗೆ ನಿಲ್ಲುತ್ತೇವೆ.
  • ಅದೇ ಕಾರಣದಿಂದ, ಹೊಸ ಟಾಟಾ ಯೋಧಾ ಬಿಎಸ್‌6 ಸರಣಿಯ ಪಿಕಪ್ ವಾಹನಗಳನ್ನು ಕಡಿಮೆ ವೆಚ್ಚಗಳು, ಅಧಿಕ ಲಾಭಗಳ ಆಶ್ವಾಸನೆಯಲ್ಲಿ ನಿರ್ಮಿಸಲಾಗಿದೆ. ವಿಭಾಗದಲ್ಲಿಯೇ ಅತೀ ಶಕ್ತಿಯುತ ಮತ್ತು ಇಂಧನ ಕ್ಷಮತೆ ಹೊಂದಿರುವ ಇಂಜಿನ್‌ನ ಶಕ್ತಿಯನ್ನು ಪಡೆದು, ಮತ್ತು ಅತೀ ವಿಶಾಲವಾದ ಸರಕು ಹೇರುವ ಜಾಗವನ್ನು ಹೊಂದಿರುವ ಟಾಟಾ ಯೋಧಾ, ಭಾರತದ ರಸ್ತೆಗಳ ಮೇಲಿನ ಒಂದು ಗಟ್ಟಿಮುಟ್ಟಾದ ಮತ್ತು ಅತೀ ಸ್ಟೈಲಿಶ್ ಪಿಕಪ್ ಸರಣಿಯಾಗಿದೆ.
  • ಸಿಂಗಲ್ ಕ್ಯಾಬಿನ್ ಮತ್ತು ಕ್ರ್ಯೂ ಕ್ಯಾಬಿನ್ ವೇರಿಯಂಟ್‌ ಎರಡರಲ್ಲೂ 4x2 ಮತ್ತು 4x4 ಚಾಲನಾ ಅವಕಾಶಗಳಲ್ಲಿ ಲಭ್ಯವಿದ್ದು, ವೈವಿಧ್ಯಮಯ ಭಾರ ಹೊರುವ ಸಾಮರ್ಥ್ಯವಾದ 1200 ಕೆಜಿ, 1500 ಕೆಜಿ ಮತ್ತು 1700 ಕೆಜಿ ಗಳಲ್ಲಿ ಸಿಗುವ ಯೋಧಾ ಪಿಕಪ್ ಸರಣಿಯನ್ನು ಹಲವು ಉದ್ದೇಶಗಳಿಗೆ ಸೂಕ್ತವಾಗುವಂತೆ ನಿರ್ಮಾಣ ಮಾಡಲಾಗಿದೆ. ಪೂರಕವಾಗಿ, ಅದರ ಕ್ಯಾಬಿನ್ ಚಾಸಿ ವೇರಿಯಂಟ್ ಕಸ್ಟಮೀಕೃತ ಬಾಡಿ ಆಯ್ಕೆಗಳ ನಮ್ಯತೆಯನ್ನು ಒದಗಿಸುತ್ತದೆ.
  • ಟಾಟಾ ಯೋಧಾ ಪಿಕಪ್ BS6 ಸರಣಿ ಪ್ರಗತಿಯ ಕಡೆಗೆ ಸಾಗುವಾಗ ನಿಮ್ಮ ಅತ್ಯುತ್ತಮ ಸಹಭಾಗಿಯಾಗಿರುತ್ತದೆ ಮತ್ತು ನಿಮ್ಮ ಉದ್ಯಮವನ್ನು ಕಡಿಮೆ ವೆಚ್ಚ (ಒಟ್ಟು ಮಾಲೀಕತ್ವದ ವೆಚ್ಚ) ಮತ್ತು ಗರಿಷ್ಠ ಲಾಭದ ಆಶ್ವಾಸನೆಯಲ್ಲಿ ಸಾಗಿಸುತ್ತದೆ.
ಟಾಟಾ ಯೋಧಾ BS6 - 6 ಕಾ ದಮ್ ಜೊತೆಗೆ
ಯೋಧಾ ಪಿಕಪ್ ಸರಣಿಯನ್ನು ಆರು ಮೌಲ್ಯದ ಸ್ತಂಭಗಳಲ್ಲಿ ನಿರ್ಮಾಣ ಮಾಡಿರುವ ಕಾರಣ ಸ್ಪರ್ಧಿಗಳಿಗಿಂತ ಮುಂಚೂಣಿಯಲ್ಲಿದೆ.
ಟಾಟಾ ಯೋಧಾ ಪಿಕಪ್ ಟ್ರಕ್ ಪಿಕಪ್ ಅವಲೋಕನ
ಡೈನಾಮಿಕ್ ಶಕ್ತಿ
73.6 kW (100 HP) ಇಂಜಿನ್ ಶಕ್ತಿ ಮತ್ತು 250 Nm ಟಾರ್ಕ್‌, 1000 ರಿಂದ 2500 ಆರ್‌/ನಿಮಿಷ
ನಂಬಿಕಾರ್ಹ ಕಾರ್ಯಕ್ಷಮತೆ
210 mm ಗ್ರೌಂಡ್ ಕ್ಲಿಯರೆನ್ಸ್ & 40% ಗ್ರೇಡೇಬಿಲಿಟಿ
ಗರಿಷ್ಠ ಲಾಭಗಳು
47.9 ಚದರ ಅಡಿ ರಷ್ಟು ಆಂತರಿಕ ಸರಕು ಹೇರುವ ಜಾಗ ಮತ್ತು 1700 ಕೆಜಿವರಗೆ ಭಾರ ಹೊರಬಲ್ಲದು
ಸಮಾಧಾನಕರ ರಕ್ಷಣೆ
ಕ್ರಂಪಲ್ ವಲಯವಿರುವ ಫ್ರಂಟ್ ಬಾನೆಟ್, ಅಗಲವಾದ ಆಕ್ಸಲ್‌ಗಳು ಮತ್ತು ಕೊಲ್ಯಾಪ್ಸ್ ಆಗಬಹುದಾದ ಸ್ಟೀರಿಂಗ್ ವೀಲ್‌ನಿಂದ ಒಳಗಿರುವವರು ಮತ್ತು ಸರಕುಗಳ ಸುರಕ್ಷತೆಯ ಖಾತರಿ ಸಿಗುತ್ತದೆ
ಅಧಿಕ ಉಳಿತಾಯ
ಅಧಿಕ ಸೇವೆಯ ಮಧ್ಯಂತರಗಳು & ಈಕೋ ಫ್ಯೂಯೆಲ್ ಉಳಿತಾಯ ಮೋಡ್
ಅತ್ಯುತ್ತಮ ಆರಾಮದಾಯಕ
ಹೆಡ್‌ರೆಸ್ಟ್‌ ಜೊತೆಗೆ ಫ್ಲಾಟ್ ಹಿಂಬದಿವಾಲುವ ಸೀಟುಗಳು
ಅಧಿಕ-ಉಪಯುಕ್ತ ಡ್ಯಾಷ್‌ಬೋರ್ಡ್ ಮತ್ತು ಕ್ಯಾಬಿನ್ ಒಳಾಂಗಣಗಳು
ಅಪ್ಲಿಕೇಶನ್‌ಗಳು

ಟಾಟಾ ಯೋಧಾ ಸರಣಿಯ ಪಿಕಪ್‌ಗಳು ಸರಕುಗಳು ಮತ್ತು ಪ್ರಯಾಣಿಕರ ಸಾಗಾಟದ ವೈವಿಧ್ಯಮಯ ವಾಣಿಜ್ಯ ಉದ್ದೇಶಗಳಿಗೆ ಸೂಕ್ತ ಪರಿಹಾರವಾಗಿದೆ: ಹಾಲು, ಕೃಷಿ ಉತ್ಪನ್ನ (ಆಹಾರ ಧಾನ್ಯಗಳು), ಹಣ್ಣುಗಳು & ತರಕಾರಿಗಳು, ಕೋಳಿ ಮಾಂಸ,

  • ಮೀನುಗಾರಿಕೆ, ಪಾರ್ಸೆಲ್/ ಕೊರಿಯರ್, ಕಂಟೇನರ್‌ಗಳು, ಕ್ಯಾಟರಿಂಗ್, FMCG, ಹಾರ್ಡ್‌ವೇರ್, ಸಿಮೆಂಟ್, LPG ಸಿಲಿಂಡರ್‌ಗಳು, ಕ್ಯಾಷ್ ವ್ಯಾನ್, ನಿರ್ಮಾಣ/ ಸೈಟ್ ಬೆಂಬಲ ಮತ್ತು ಇನ್ನೂ ಅಧಿಕ.